ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ತಾಲೂಕು ಹವ್ಯಕ ಸಭಾ ರಿ. ಇದರ ವಾರ್ಷಿಕೋತ್ಸವ ಎಪ್ರಿಲ್ 6 ರಂದು ಉಪ್ಪುಂದ ಪಟೇಲರ ಮನೆಯಲ್ಲಿ ನಡೆಯಲಿದ್ದು ಪ್ರತಿಭಾ ಪುರಸ್ಕಾರವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕುಂದಾಪುರ-ಬೈಂದೂರು ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಹವ್ಯಕ ಸಮಾಜದ ವಿದ್ಯಾರ್ಥಿಗಳಿಗೆ 2022-23 ಮತ್ತು 2023-24 ರಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೇಯಲ್ಲಿ ಶೇಕಡಾ 90% ಗಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಅಂಕಪಟ್ಟಿ ಪ್ರತಿಯೊಂದಿಗೆ ಕೈ ಬರಹದ ಅರ್ಜಿಯನ್ನು ಯು. ಸಂದೇಶ್ ಭಟ್ ಪ್ರಧಾನ ಕಾರ್ಯದರ್ಶಿ ಪಟೇಲರ ಮನೆ ಉಪ್ಪುಂದ ಅಂಚೆ, ಬೈಂದೂರು ತಾಲೂಕು – 576232 (ಮೊಬೈಲ್ ನಂ : 9449616434) ಈ ವಿಳಾಸಕ್ಕೆ ಎಪ್ರಿಲ್ 1 ರ ಒಳಗೆ ಕಳುಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.