ಮೂಡುಬಿದಿರೆ: ಮಹಿಳಾ ಪರ ಆಲೋಚನೆಯುಳ್ಳ ಬಹುದೊಡ್ಡ ಪುರುಷ ಪಡೆಯು ನಮ್ಮಲ್ಲಿದ್ದು ಇವರೇ ಮೊಟ್ಟಮೊದಲಿಗೆ ಮಹಿಳಾ ಚಳುವಳಿಗೆ ರೂಪುರೇಷೆಯನ್ನು ಹಾಕಿಕೊಟ್ಟರು ಎಂದು ಚಿಂತಕಿ ಗಾಯತ್ರಿ ನಾವಡ ಅಭಿಪ್ರಾಯಪಟ್ಟರು.
ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಮಹಿಳಾ ಚಳುವಳಿ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಳುವಳಿಯ ಸ್ವರೂಪ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದ್ದು ಎಲ್ಲಾ ಕಾಲಗಳ್ಲಲಿಯೂ ಸ್ತ್ರೀಯರು ಕೆಲವೆಡೆ ಪುರುಷರಿಗೆ ಬೆಂಗಾವಲಾಗಿ ನಿಂತರೆ ಇನ್ನೂ ಕೆಲವೆಡೆ ತಾವೇ ಸಕ್ರಿಯವಾಗಿ ಚಳುವಳಿಗಳಲ್ಲಿ ಭಾಗವಹಿಸಿರುವುದನ್ನು ಗಮನಿಸಬಹುದು ಎಂದರು. ದಕ್ಷಿಣ ಕರ್ನಾಟಕದ ಮಹಿಳೆಚಿiರು ಉಪ್ಪಿನ ಸತ್ಯಾಗ್ರಹದಲ್ಲಿ ಮತ್ತು ಉತ್ತರ ಕರ್ನಾಟಕದ ಮಹಿಳೆಯರು ಕರನಿರಾಕರಣೆ ಮೊದಲಾದವುಗಳ್ಲಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಎಂದರು.