ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಮಲಶಿಲೆ ಗ್ರಾಮದ ಯಳಬೇರು ಶ್ರೀ ಗೋಪಾಲಕೃಷ್ಣ ದೇವಳದ 10ನೇ ವರ್ಷದ ವರ್ಧಂತ್ಯುತ್ಸವ ಎ.3 ಗುರುವಾರದಂದು ಬೆಳಿಗ್ಗೆ 08-00ರಿಂದ ಜರುಗಲಿದೆ.
ವರ್ಧಂತ್ಯುತ್ಸವ ಅಂಗವಾಗಿ ಇಷ್ಟದೇವತಾ ಪ್ರಾರ್ಥನಾಪೂರ್ವಕ ಫಲನ್ಯಾಸ, ಪುಣ್ಯಾಹವಾಚನ, ಗೋಪಾಲಕೃಷ್ಣ ದೇವರಿಗೆ ಗಣಹೋಮ, ಪಂಚವಿಂಶತಿ ಕಲಶಸ್ಥಾಪನೆ, ಕಲಾತತ್ವ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ ಮಹಾಪೂಜೆ, ನಾಗದೇವರಿಗೆ ಕಲಶಾಭಿಷೇಕ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಅದೇ ದಿನ ಬೆಳಿಗ್ಗೆ 10.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಮಾರಣಕಟ್ಟೆ ಸುಬ್ರಹ್ಮಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಅವರು ಉದ್ಘಾಟನೆ ನೆರವೆರಿಸಲಿದ್ದಾರೆ. ಯಳಬೇರು ಶ್ರೀ ಗೋಪಾಲಕೃಷ್ಣ ದೇವಾಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ನಾಗಶಯನ ಕನ್ನಂತ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಅಂದು ಶ್ರೀ ಕ್ಷೇತ್ರ ಕಮಲಶಿಲೆ ಆಡಳಿತ ಧರ್ಮದರ್ಶಿಗಳಾದ ಎಸ್. ಸಚ್ಚಿದಾನಂದ ಚಾತ್ರರು, ಶಿರಿಯಾರ ಪಡುಮುಂಡು ವೇ.ಮೂ. ಸುಧೀರ್ ಅಡಿಗರು, ಕುಂದಾಪುರ ಶ್ರೀ ಕ್ಷೇತ್ರ .ಧ.ಗ್ರಾ.ಯೋ., ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿ ನಾರಾಯಣ್ ಪಾಲನ್ ಹಾಗೂ ಹುಬ್ಬಳ್ಳಿ ಉದ್ಯಮಿ ಹರಿ ಓಂ ಸುಧಾಕರ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಅಂದು ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 8.00 ರಿಂದ ಭಜನೆ ಹಾಗೂ ರಂಗಪೂಜೆ ಸೇವೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.