ಕುಂದಾಪುರ: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಯಂಗಡಿ ದೇವಳ ಸಮೀಪದ ಸಭಾಭವನದ ಟೆರೇಸ್‌ನಲ್ಲಿ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.

Call us

Click Here

ಮೃತರು ಉಳ್ಳೂರು ಗ್ರಾಮದ ನಿವಾಸಿ ಕೆ. ಶ್ರೀನಿವಾಸ (85) ಎಂದು ಗುರುತಿಸಲಾಗಿದೆ. ದೇವರ ಅಪಾರ ಭಕ್ತರಾಗಿದ್ದ ಅವರು ಆಗಾಗ್ಗೆ ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಮಾ.18ರಂದು ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂದು ಯಾರಿಗೂ ಹೇಳದೆ ಹೊರಟು ಹೋಗಿದ್ದರು. ಹುಡುಕಾಡಿದರು ಪತ್ತೆಯಾಗದ ಕಾರಣ ಮನೆಯವರು ಕೋಟ ಠಾಣೆಯಲ್ಲಿ ನಾಪತ್ತೆಯಾಗಿರುವುದಾಗಿ ಸಲ್ಲಿಸಿದ್ದರು. ಬುಧವಾರ ದೂರು ಸಂಜೆ

ಸಭಾಭವನ ವಠಾರದಲ್ಲಿ ದುರ್ವಾಸನೆ ಕಂಡುಬಂದಿದ್ದು ಪರಿಶೀಲನೆ ನಡೆಸಿದಾಗ ಟೆರೇಸ್‌ನಲ್ಲಿ ಅಡಕೆ ಒಣಗಿಸಲು ಹಾಕಲಾದ ಪ್ಲಾಸ್ಟಿಕ್ ಶೆಡ್‌ನ ಒಳಗೆ ಬಿಸಿಲಿನ ಹೊಡೆತಕ್ಕೆ ಬೆಂದು ಕರಕಲಾಗಿ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಕಾಯಿಲೆಯಿಂದ ವಯೋಸಹಜ ಬಳಲುತ್ತಿದ್ದವರು ದೇವರ ಮೇಲಿನ ಅಪಾರ ಭಕ್ತಿಯ ಕಾರಣಕ್ಕೆ ಉಪವಾಸ ಮಾಡಿ ಅಸ್ವಸ್ಥರಾಗಿಯೋ ಅಥವಾ ಬೇರಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದೆಂದು ಪುತ್ರಿ ಗೀತಾ ಉಳ್ಳೂರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply