ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಮಂಗಳೂರು ವಿ. ವಿ. ಅಂತರ್ ಕಾಲೇಜು ಮಟ್ಟದ ಪುರುಷರ ಮತ್ತು ಮಹಿಳೆಯರ ಸಾಫ್ಟ್ ಬಾಲ್ ಪಂದ್ಯಾಟ ಸಂಪನ್ನಗೊಂಡಿತು.
ಪುರುಷರ ವಿಭಾಗದಲ್ಲಿ ಸತತ ಮೂರು ವರ್ಷಗಳಿಂದ ಚಾಂಪಿಯನ್ನಾಗಿ ಮೂಡಿಬರುವ ಮೂಲಕ ಅತಿಥೇಯ ಡಾ| ಬಿ.ಬಿ. ಹೆಗ್ಡೆ ಕಾಲೇಜು ಹ್ಯಾಟ್ರಿಕ್ ಸಾಧನೆ ಮಾಡಿ, ಬಿ.ಎಂ.ಎಸ್. ಪರ್ಯಾಯ ರಜತ ಪಾರಿತೋಷಕವನ್ನು ಪಡೆಯಿತು. ಮೂಡುಬಿದರೆ ಶ್ರೀ ಮಹಾವೀರ ಕಾಲೇಜು ರನ್ನರ್ ಅಪ್ ಪ್ರಶಸ್ತಿ, ವಿ.ವಿ. ಕ್ಯಾಂಪಸ್ ತೃತೀಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಚತುರ್ಥ ಸ್ಥಾನ ಪಡೆಯಿತು. ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಡೇವಿಡ್ ಬೆಸ್ಟ್ ಪಿಚ್ಚರ್, ಮಹಾವೀರ ಕಾಲೇಜಿನ ಪ್ರಣೇಶ್ ಬೆಸ್ಟ್ ಪ್ಲೇಯರ್ ವೈಯಕ್ತಿಕ ಪ್ರಶಸ್ತಿ ಪಡೆದರು.
ಮಹಿಳೆಯರ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು ಪ್ರಥಮ, ಎಸ್.ಡಿ. ಎಮ್. ಉಜಿರೆ ದ್ವಿತೀಯ, ಡಾ| ಬಿ.ಬಿ. ಹೆಗ್ಡೆ ಕಾಲೇಜು ತೃತೀಯ ಹಾಗೂ ವಿ.ವಿ. ಕ್ಯಾಂಪಸ್ ಚತುರ್ಥ ಸ್ಥಾನ ಪಡೆಯಿತು. ಎಸ್.ಡಿ.ಎಮ್. ಕಾಲೇಜಿನ ಧನುಶ್ರೀ ಬೆಸ್ಟ್ ಪಿಚ್ಚರ್, ವಾಮದಪದವು ಕಾಲೇಜಿನ ಮನಸ್ವಿ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದರು.
ಸಂಸ್ಥೆಯ ಅಧ್ಯಕ್ಷರಾದ ಬಿ. ಎಂ. ಸುಕುಮಾರ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ| ಪ್ರಸನ್ನ, ವಕೀಲರಾದ ಪ್ರಶಾಂತ್ ಹೆಬ್ಬಾರ್, ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕ ರತ್ನಾಕರ್ ಪುತ್ತಿ ,ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್. ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಪ್ರಸ್ತಾವಿಸಿದರು. ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಕಾಲೇಜಿನ ಡೀನ್ ಅಕಾಡೆಮಿಕ್ ಗಿರಿರಾಜ್ ಭಟ್ ನೆಂಪು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಗಣಕ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಪ್ರಣಮ್ ಆರ್. ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.