ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಮಾಸೆಬೈಲು: ಹೆತ್ತವರ ಮನೆಯಲ್ಲಿಯ ಪರಿಶ್ರಮ ಹಾಗೂ ಶಿಕ್ಷಕರ ಶೈಕ್ಷಣಿಕ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆತ್ತವರು ಭಾಗವಹಿಸಿ ಸಂಭ್ರಮಿಸಬೇಕು ಎಂದು ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಹೇಳಿದರು.
ಅವರು ಇಲ್ಲಿನ ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಪದಪ್ರದಾನ ಅಧಿಕಾರಿಯಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ವಡ್ಡರ್ಸೆ ಪ್ರಕಾಶ್ ಆಚಾರ್ಯ ವಹಿಸಿ, ಮಕ್ಕಳ ಸಂತಸ ಪೋಷಕರಿಗೆ ಆನಂದ ಅದನ್ನು ಮಕ್ಕಳೊಂದಿಗೆ ಸಂಭ್ರಮಿಸಬೇಕು ಎಂದರು.
ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಕಾಂತ್ ಶೆಟ್ಟಿ ಜಡ್ಡಿನಗದ್ದೆ, ಜ್ಯೋತಿ ಪೂಜಾರಿ, ನಿಲ್ಸಕಲ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಗಾಯತ್ರಿ ಅಡಿಗ ಕಾರ್ಯದರ್ಶಿ ಸುನೀತಾ ಕಾಮತ್, ಶಾಲಾ ಸಂಚಾಲಕರಾದ ಶಶಿಧರ್ ದೇವಾಡಿಗ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಧಿಕಾ ರಾವ್ ಮೇಡಂ, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಅಮಿತಾ ಮೇಡಂ ಉಪಸ್ಥಿತರಿದ್ದರು.
ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು. ಕಿಂಡರ್ ಗಾರ್ಟನ್ ಶಿಕ್ಷಕಿ ಸರೋಜಿನಿ ಮೇಡಂ ಸ್ವಾಗತಿಸಿದರು, ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಕಿಂಡರ್ ಗಾರ್ಟನ್ ಶಿಕ್ಷಕಿ ಪೂರ್ಣಿಮ ಮೇಡಂ ವಂದಿಸಿದರು, ಕಿಂಡರ್ ಗಾರ್ಟನ್ ಮುಖ್ಯಸ್ಥೆ ಸೌಮ್ಯ ಮೇಡಂ ಕಾರ್ಯಕ್ರಮ ನಿರೂಪಿಸಿದರು.