ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಟ್ಟಿನಮಕ್ಕಿ ಶ್ರೀ ಮಹಾಲಿಂಗೇಶ್ವರ ಕಲಾ ಸಂಘದ 7ನೇ ವಾರ್ಷಿಕೋತ್ಸವವು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇತ್ತೀಚಿಗೆ ಜರುಗಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮ ಉದ್ಘಾಟಿಸಿ, ಕಟ್ಟಿನಮಕ್ಕಿ ಈ ಭಾಗದ ಪ್ರಮುಖ ಸಮಸ್ಯೆಯ ಬಗ್ಗೆ ಅರಿವಿದ್ದು ವಿವಿಧ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪರಿಹಾರೋಪಾಯದ ಮಾರ್ಗದ ಕುರಿತು ಚಿಂತಿಸುವುದಾಗಿ ತಿಳಿಸಿ, ಕಲಾ ಸಂಘದ ಪ್ರಯತ್ನಗಳನ್ನು ಮತ್ತು ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎನ್. ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ ಕಳಿ, ಆಲೂರು ಹರ್ಕೂರು ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಎಚ್. ಮಂಜಯ್ಯ ಶೆಟ್ಟಿ ಹರ್ಕೂರು, ಆಲೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ ಕುಶಲ ಶೆಟ್ಟಿ, ಕಲಾ ಸಂಘದ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ರಾಜೇಂದ್ರ ದೇವಾಡಿಗ ಅವರು ಶುಭ ಹಾರೈಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಿಖ್ಯಾತ ದೇವಾಡಿಗ, ಆಶಿಕಾ ದೇವಾಡಿಗ, ಅವರನ್ನು ಗೌರವಿಸಲಾಯಿತು. ವರ್ಷದ ವ್ಯಕ್ತಿಯಾಗಿ ಶೀನ ದೇವಾಡಿಗ ಕಟ್ಟಿನಮಕ್ಕಿ ದೈವದಮನೆ ಸನ್ಮಾನಿಸಲಾಯಿತು.
ಗಿಚ್ಚಿಗಿಲಿ ಖ್ಯಾತಿಯ ಪ್ರಸಾದ್ ಜೋಗಿ ಅವರನ್ನು ಗೌರವಿಸಲಾಯಿತು. ದೀಪಾ ದೇವಾಡಿಗ ಸ್ವಾಗತಿಸಿದರು. ಸವಿತಾ ವಂದಿಸಿದರು. ವಿಜೇಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.