ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಮತ್ತು ಹಳೆ ವಿದ್ಯಾರ್ಥಿ ಸಂಘ ಆಶ್ರಯದಲ್ಲಿ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಮತ್ತು ಬೈಂದೂರು ಸಹಯೋಗದೊಂದಿಗೆ ಖಗೋಳ ವೀಕ್ಷಣೆ ಕಾರ್ಯಕ್ರಮವು ಶಾಲೆಯ ವಠಾರದಲ್ಲಿ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಚಿತ್ತೂರು ಪ್ರೌಢಶಾಲೆಯ ಅಧ್ಯಾಪಕ ನಾರಾಯಣ ಮರಾಠಿ, ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ ಬಂಟ್, ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಗಾಯತ್ರಿ ಕೊಡಂಚ, ಗುಜ್ಜಾಡಿ ಗ್ರಾಪಂ. ಸದಸ್ಯರಾದ ಹರೀಶ್ ಮೇಸ್ತ ಮತ್ತು ತುಂಗ ಪೂಜಾರಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕಿ ಸಂಧ್ಯಾ ಗಾಂವ್ಕರ್, ರವೀಂದ್ರ ಕೋಡಿ, ರವಿ ಕಟಗೇರಿ, ಸಂದೇಶ ಕುಂದಾಪುರ, ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಖಗೋಳದ ವಿಸ್ಮಯದ ಬಗ್ಗೆ ಸಂಪನ್ಮೂಲ ವ್ಯಕ್ತಿ, ಪ್ರೌಢಶಾಲಾ ಅಧ್ಯಾಪಕ ಉದಯ್ ಗಾಂವ್ಕರ್ ಖಗೋಳ ವಿಸ್ಮಯವನ್ನು ಶಾಲಾ ಮಕ್ಕಳಿಗೆ ಪರಿಚಯ ಮಾಡಿ ಕೊಡುವ ಮೂಲಕ ಗ್ರಹಗಳು ಮತ್ತು ನಕ್ಷತ್ರಗಳ ಬಗ್ಗೆ ಪರಿಚಯ ಮಾಡಿಕೊಟ್ಟು ಮಾಹಿತಿ ನೀಡಿದರು.
ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಸತ್ಯನಾ ಕೊಡೇರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಶಿಕ್ಷಕ ಶ್ರೀಧರ್ ನಿರೂಪಿಸಿ, ಶಿಕ್ಷಕಿ ಮಾಧವಿ ಸ್ವಾಗತಿಸಿ, ವಿಶ್ವನಾಥ್ ವಂದಿಸಿದರು.















