ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80.76 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 655 ವಿದ್ಯಾರ್ಥಿಗಳ ಪೈಕಿ 529 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 202 ವಿದ್ಯಾರ್ಥಿಗಳು ಹಾಗೂ 327 ವಿದ್ಯಾರ್ಥಿನಿಯರಿದ್ದಾರೆ.
ವಿಷಯವಾರು ಫಲಿತಾಂಶದಲ್ಲಿ ಹಿಂದಿ, ಸಂಸ್ಕೃತ, ಬಯಾಲಾಜಿ, ಐಟಿ ಹಾಗೂ ಆಟೋಮೊಬೈಲ್ ವಿಷಯದಲ್ಲಿ ಶೇ.100 ಫಲಿತಾಂಶ ಬಂದಿದ್ದು, ಬ್ಯುಸಿನೆಸ್ ಸ್ಟಡೀಸ್ ವಿಷಯದಲ್ಲಿ ಶೇ.88.06 ಫಲಿತಾಂಶ ದಾಖಲಿಸಿದ್ದಾರೆ. ಉಳಿದ ವಿಷಯಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಿಸಲಾಗಿದೆ.










