ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 10 ರ್‍ಯಾಂಕ್ ಪಡೆಯುವುದರ ಮೂಲಕ ಶೇ. 100 ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸುಮಿತ್ರಾ ಭಟ್ (593 ) ರಾಜ್ಯಕ್ಕೆ 7ನೇ ರ್‍ಯಾಂಕ್, ಸನ್ನಿಧಿ ಎಮ್ (592) 8ನೇ ರ್‍ಯಾಂಕ್, ಕೀರ್ತನಾ, ರಂಜಿತಾ (591), 9ನೇ ರ್‍ಯಾಂಕ್, ಅನನ್ಯ, ಚೈತ್ರಾ, ನಿಶಾ, ಸಾತ್ವಿಕ್( 590) 10ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ವಿ. ದಿವೀಶ್ ಶೆಣೈ (592) 8ನೇ ರ್ಯಾಂಕ್, ಪ್ರಣವಿ ಉಳ್ಳೂರ್ ಕೆ. (590) 10ನೇ ರ್‍ಯಾಂಕ್ ಪಡೆದುಕೊಳ್ಳುವುದರ ಮೂಲಕ ಸಾಧನೆ ಮೆರೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 183 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 125 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ154 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 110 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 44ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸಂಸ್ಕೃತ 42, ಸಂಖ್ಯಾಶಾಸ್ತ್ರ 26, ಕನ್ನಡ 18, ವ್ಯವಹಾರ ಅಧ್ಯಯನ 12, ಗಣಿತ ಶಾಸ್ತ್ರ 11, ಕಂಪ್ಯೂಟರ್ ಸೈನ್ಸ್ 9, ಲೆಕ್ಕಶಾಸ್ತ್ರ 07, ಅರ್ಥಶಾಸ್ತ್ರ 7, ರಸಾಯನ ಶಾಸ್ತ್ರ 04, ಭೌತಶಾಸ್ತ್ರ 03, ಜೀವಶಾಸ್ತ್ರ 02 ವಿಷಯವಾರು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಕಾಲೇಜಿನ ಮೆರುಗನ್ನು ಹೆಚ್ಚಿಸಿದ್ದಾರೆ. ಚೈತ್ರಾ, ನಿಶಾ, ಸಾತ್ವಿಕ್ ವಿ. ದಿವೀಶ್ ಶೆಣೈ ಪ್ರಣವಿ
ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.