ಪಾಂಡೇಶ್ವರ- ಶತಮಾನ ಕಂಡ ಶಾಲೆ ಉಳಿಸುವ ಮಹತ್ಕಾರ್ಯ ಶ್ಲಾಘನೀಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಒಂದು ಸರಕಾರಿ ಅಥವಾ ಅನುದಾನಿತ ಶಾಲೆ ಶತಮಾನ ಕಾಣುವುದು ಸುಲಭದ ಮಾತಲ್ಲ ಅದನ್ನು ಮುನ್ನಡೆಸುವ ಮಹತ್ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

Call us

Click Here

ಅವರು ಮಂಗಳವಾರ ಸಾಸ್ತಾನದ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವ ಸಂಭಮದ ಅಂಗವಾಗಿ ಶತಾವರ್ತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಮಾಡಿದರು.

ಸರಕಾರಿ ಮತ್ತು ಅನುದಾನಿತ ಶಾಲೆಗಳ ಸ್ಥಿತಿಗತಿ ಅವಲೋಕಿಸಿದರೆ ಬಾರಿ ಕ್ಲಿಷ್ಟಕರವಾಗಿದೆ. ಈ ದಿಸೆಯಲ್ಲಿ ಶಾಲಾಭಿವೃದ್ಧಿಗೆ ಬೇಕಾದ ಸಮಿತಿಗಳ ಮೂಲಕ ಶಾಲೆ ಉಳಿಸಿ ಬೆಳೆಸುವ ಪ್ರಯತ್ನ ಶ್ಲಾಘನೀಯ ಎಂದರಲ್ಲದೆ ದೇಶ ಕಟ್ಟುವ  ಶಿಕ್ಷಣ ಅದರಲ್ಲೂ ಎಲ್ಲಾ ಜಾತಿಮತ ಧರ್ಮಗಳನ್ನು ಮೀರಿ ಸಂಘರ್ಷ ಇಲ್ಲದ ಶಿಕ್ಷಣ ನಮ್ಮ ಮಕ್ಕಳಿಗೆ ಸಿಗುವಂತ್ತಾಗಬೇಕು ಈ ನಿಟ್ಟಿನಲ್ಲಿ ಪಾಂಡೇಶ್ವರ ಈ ಶಾಲೆಯ ಅಭಿವೃದ್ಧಿ ಅದಕ್ಕೆ ಬೇಕಾದ ಮೂಲಸೌಕರ್ಯಗಳ ಅನುಕೂಲತೆಯ ವಾತಾವರಣ ಸೃಷ್ಠಿಯಾಗಲಿ ತನ್ಮೂಲ ಇಡೀ ವ್ಯವಸ್ಥೆ ಮಾದರಿ ಶಾಲೆಯಾಗಿ ಅನುದಾನಿತ ವ್ಯವಸ್ಥೆಗೆ ಮುನ್ನುಡಿ ಬರೆಯಲಿ ಎಂದು ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಹಾಗೂ ಪ್ರಸ್ತುತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ಶಾಲಾ ವಾಹನ ಚಾಲಕರಿಗೆ ಸೇವಾ ಸಾರಥಿ ಗೌರವಾರ್ಪಣೆ ನೀಡಲಾಯಿತು. ಯೋಗಗುರುಕುಲದ ಮುಖ್ಯಸ್ಥ ಡಾ. ವಿದ್ವಾನ್ ವಿಜಯ ಮಂಜರ್ ಸ್ವಸ್ತಿವಾಚನ ನೀಡಿದರು.

Click here

Click here

Click here

Call us

Call us

ಮುಖ್ಯ ಅಭ್ಯಾಗತರಾಗಿ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ. ವಿ ರಮೇಶ್ ರಾವ್, ಶಾಲಾ ಸಂಚಾಲಕ ಫಾದರ್ ಸುನಿಲ್ ಡಿಸಿಲ್ವಾ, ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಬಿ. ಎಂ ಭಟ್, ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ್ ಬಿ.ಬಿ., ಪಾಂಡೇಶ್ವರ ಭಾರ್ಗವಿ ಟ್ರಸ್ಟ್ ಮುಖ್ಯಸ್ಥೆ ನಂದಿನಿ ರಾಜೇಶ್ ಆರ್ಯ, ಕ್ಯಾಥೋಲಿಕ್ ಸಭಾ ಸಂತ ಅಂತೋನಿಇಗರ್ಜಿ ಅಧ್ಯಕ್ಷೆ ಸರಿತಾ ಗೊನ್ಸಾಲ್ವಿಸ್, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ. ಚಂದ್ರಶೇಖರ್  ಪೂಜಾರಿ, ಸುರಕ್ಷಾ ಸಮಿತಿ ಅಧ್ಯಕ್ಷ ರವೀಶ್ ಶ್ರೀಯಾನ್, ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಪೂಜಾರಿ, ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸುಜಾತ ವೆಂಕಟೇಶ ಪೂಜಾರಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಕೃಷ್ಣ ಪೂಜಾರಿ ವರದಿ ವಾಚಿಸಿದರು. ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುರೇಶ್ ಪೂಜಾರಿ ಶಾಲಾ ನಡೆದು ಬಂದ ದಾರಿ ಹಾಗೂ ಶತಮಾನೋತ್ಸವ ಸಂಭ್ರಮದ ಕುರಿತು ಮಾಹಿತಿ ನೀಡಿ ಸ್ವಾಗತಿಸಿದರು.

ಶಾಲಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅಲ್ವಿನ್ ಆಂದ್ರಾದೆ, ಶಾಲಾ ಹಿಂದಿನ ವಿದ್ಯಾರ್ಥಿ ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು. ಸತತ ಎರಡು ದಿನಗಳ ಶತಮಾಮೋತ್ಸವ ಸಂಭ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಲರವ ಹಾಗೂ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರಿಂದ ಬಿಡುವನೇ ಬ್ರಹ್ಮಲಿಂಗ ಎನ್ನುವ ನೃತ್ಯ ರೂಪಕ ಯಶಸ್ವಿಯಾಗಿ ಜರಗಿತು.

ಸ್ತಾನದ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವ ಸಂಭಮದ ಅಂಗವಾಗಿ ಶತಾವರ್ತ ಸಂಭ್ರಮ ಕಾರ್ಯಕ್ರಮವನ್ನು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಯೋಗಗುರುಕುಲದ ಮುಖ್ಯಸ್ಥ ಡಾ. ವಿದ್ವಾನ್ ವಿಜಯ ಮಂಜರ್, ಶಾಲಾ ಮುಖ್ಯ ಶಿಕ್ಷಕ ಕೃಷ್ಣ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುರೇಶ್ ಪೂಜಾರಿ, ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಶಾಲಾ ಸಂಚಾಲಕ ಫಾದರ್ ಸುನಿಲ್ ಡಿಸಿಲ್ವಾ, ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ ಭಟ್ ಮತ್ತಿತರರು ಇದ್ದರು.

Leave a Reply