ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿಗೆ ಶೇ.90.48 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 127 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 27 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಸ್ಕೃತ ವಿಷಯದಲ್ಲಿ 13 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದರೆ, ಗಣಿತಶಾಸ್ತçದಲ್ಲಿ ಹಾಗೂ ವ್ಯವಹಾರ ಅಧ್ಯಯನದಲ್ಲಿ ತಲಾ ಒಬ್ಬ ವಿದ್ಯಾರ್ಥಿ 100 ಅಂಕಗಳನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 577 ಅಂಕಗಳನ್ನು ಪಡೆದಿರುವ ಕ್ಷಮಾ ಆರ್.ಆಚಾರ್ಯ ಕಾಲೇಜಿನ ಅಗ್ರ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ 576 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ (576), ದಿವ್ಯಾ ಡಿ.ಮೇಸ್ತ (565), ಸೃಷ್ಟಿ (559), ಪ್ರಥಮ್ ಟಿ.ನಾಯಕ್ (553), ಸುಶ್ಮಿತಾ (545), ಶ್ರೀರಕ್ಷಾ ಶೆಣೈ (544), ಮೊತಾಸೀನ್ ಫಾತೀಮಾ (543), ರಕ್ಷಿತಾ (532), ಜೊಲ್ವಿನ್ ಎಲ್.ರೆಬೆಲ್ಲೊ (532), ಫಾತಿಮತ್ ಸಫ್ರೀನ್ (521), ಸ್ವಸ್ತಿಕ್ (520), ಟ್ರೆನಿಟಾ ರೆಬೆಲ್ಲೊ (520), ಗುರುಚರಣ್ ವೈದ್ಯ (520), ಧನುಷ್ ಪಟೇಲ್ (514) ಮತ್ತು ಅಲೈನಾ ಎಂ.ಎಚ್. (513) ಉತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕ್ಷಮಾ ಆರ್.ಆಚಾರ್ಯ (577), ಜ್ಯೋತಿ ಬೊತೆಲ್ಲೊ (576), ಅಪೇಕ್ಷಾ ಪಿ. (570), ರೋಶಿತ್ ಆರ್.ಚಂದನ್ (562), ಸನ್ನಿಧಿ (561), ಸಂಜನಾ ಖಾರ್ವಿ (558), ಸುನಿಧಿ (554), ಅನ್ವೇಶ್ (546), ಸಹನಾ (543), ಸುಕ್ಷಿತಾ ಎನ್. (539), ಕುಶಿ (538) ಮತ್ತು ಪೂಜಾ ಪೂಜಾರಿ (527) ಉತ್ತಮ ಸಾಧನೆ ಮಾಡಿದ್ದಾರೆ.