ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪಿ.ಯು ಕಾಲೇಜಿಗೆ ಶೇ.100 ಫಲಿತಾಂಶ

Click Here

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
2024 -25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರ ಭಾಗದ ಪ್ತತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಸತತ ಮೂರನೇ ವರ್ಷವೂ ಶೇಕಡಾ ನೂರು ಫಲಿತಾಂಶದೊಂದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ .

Click Here

Call us

Click Here



ವಿಜ್ಞಾನ ವಿಭಾಗದಲ್ಲಿ 204 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 113 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 113 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ .

ವಾಣಿಜ್ಯ ವಿಭಾಗದಲ್ಲಿ 88 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 36 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 52 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ .

ವಿಜ್ಞಾನ ವಿಭಾಗದಲ್ಲಿ- ಶ್ರದ್ದಾ ಎಸ್. ಮೊಗವೀರ (591), ಅಮೂಲ್ಯ (586 ), ಸಾನಿಕ ಎಸ್. ದೇವಾಡಿಗ (586 ), ಶೋಭಿತ್ (584), ಅಭಿದೀಪ್ ಹೆಬ್ಬಾರ್ (583 ), ಇಶ್ರ‍್ರಾ (582),  ಚಿರಂತನ್ (581 ),  ಸ್ವಾತಿ ಭಟ್ (581 ),  ರಕ್ಷಿತಾ (579 ), ಅದಿತಿ ಪ್ರವೀಣ್ (578 ),  ಹರ್ಷ (578), ನಚಿಕೇತ್ (577), ಶಶಾಂಕ್ (577), ಸಾನ್ವಿ ಪೂಜಾರಿ (576), ಶ್ರೀಶಾ (576),  ದಿವ್ಯಾ ಟಿ .ಎಸ್ (575),  ಶ್ರೀಲಹರಿ (575 ), ಶ್ರೀಶಾಂತ್ (575 ), ಅಮೂಲ್ಯ (573 ), ಗಿರೀಶ್ ವಿ. ಪೈ (573 ), ವಿಸ್ಮಯ (573),  ಪ್ರಸಾದ್ (572 ), ,ಸಹನಾ ಶೆಟ್ಟಿ (572 )  ಮೈತ್ರಿ ಪೂಜಾರಿ (571 ), ಎಸ್ ಕಿರ್ತನ (571), ಸನ್ನಿಧಿ ಎಸ್ (571 ), ಶ್ರೇಯ ಅರ್ ಶೆಟ್ಟಿ (571), ಸೊನಾಲಿ ಸಿ ಬಂಗೇರ (571),  ವಾಣಿಜ್ಯ ವಿಭಾಗದಲ್ಲಿ – ವೈಷ್ಣವಿ ಎಂ. ಪೂಜಾರಿ (589 ), ಪ್ರೇಕ್ಷಾ ಯು ಪೂಜಾರಿ (584 ), ಗೌತಮ್ (578 ), ಸನ್ವಿತಾ (578 ), ಆಶಿತಾ (572).

ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಶೇಖಡ 40 ಅಂಕ ಪಡೆದ ವಿದ್ಯಾರ್ಥಿಗಳು ಶೇಕಡಾ 85ಕ್ಕೂ ಹೆಚ್ಚು ಅಂಕಗಳಿಸಿರುವುದು ಜನತಾ ಕಾಲೇಜಿನ ಸಾಧನೆ.

ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳು 292. 150ವಿದ್ಯಾರ್ಥಿಗಳು ಉನ್ನತ ಶ್ರೇಣಿ, 142 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ. ಎಸ್ಎಸ್ಎಲ್‌ಸಿ ಯಿಂದ ಪಿಯುಸಿಗೆ ಅಂಕದಲ್ಲಿ ಬದಲಾವಣೆ. ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ತಗೆದ ವಿದ್ಯಾರ್ಥಿಗಳು  ಜನತಾ ಪಿಯು ಕಾಲೇಜಿಗೆ ಸೇರ್ಪಡೆಯಾದ ನಂತರ ಶೈಕ್ಷಣಿಕವಾಗಿ ವಿಶೇಷ ಸಾಧನೆ ಮಾಡಿರುತ್ತಾರೆ.

ವಿದ್ಯಾರ್ಥಿಗಳಾದ ಅಮೋಘ 10 ನೇ ತರಗತಿಯಲ್ಲಿ 239 ಪಿಯುಸಿ ಅಂಕ 455 , ದೀಕ್ಷಿತ್ 10ನೇ ತರಗತಿ 369 ಪಿಯುಸಿ ಅಂಕ 432 ,ಶ್ರೀಯಾನ್ ರಾಹುಲ್ 10 ನೇ ತರಗತಿ 311 ಪಿಯುಸಿ ಅಂಕ 512 ರುತಿಕಾ 10 ನೇ ತರಗತಿ 328 ಪಿಯುಸಿ ಅಂಕ 502 ಗಳಿಸಿರುತ್ತಾರೆ.

Click here

Click here

Click here

Call us

Call us

ಪ್ರಾಂಶುಪಾಲರಾದ ಗಣೇಶ್ ಮೊಗವೀರರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತಿದ್ದು ಅನುಭವಿ ಉಪನ್ಯಾಸಕ ವೃಂದದವರ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ದಾಖಲೆಯ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ.

Leave a Reply