ಕುಂದಾಪುರ: ಇಲ್ಲಿನ ಯುವ ಸಾಹಿತಿ, ಸಿರಿ ಸೌಂದರ್ಯ ಪತ್ರಿಕೆಯ ಸಂಪಾದಕ ಸಂದೀಪ್ ಶೆಟ್ಟಿ ಹೆಗ್ಗದ್ದೆ ಕುಂದಾಪ್ರ ಕನ್ನಡದಲ್ಲಿ ವಿಶಷ್ಟ ಹಾಡುಗಳ ಆಲ್ಬಮ್ ಹೊರತರು ಅಣಿಯಾಗಿದ್ದು ಇತ್ತೀಚೆಗೆ ಬೆಂಗಳೂರಿನ ‘ಸಿರಿ ಸೌಂದರ್ಯ’ ಕನ್ನಡ ಮಾಸ ಪತ್ರ್ರಿಕೆಯ ಕಛೇರಿಯಲ್ಲಿ ಆಲ್ಬಂ ಟೈಟಲ್ ಬಿಡುಗಡೆಗೊಂಡಿತು
ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಟೈಟಲ್ ಬಿಡುಗಡೆಗೊಳಿಸಿ ಮಾತನಾಡಿ, ‘ಯುವ ಉತ್ಸಾಹಿ ಯುವಕರಾದ ಸಂದೀಪ್ ಶೆಟ್ಟಿ ಹೆಗ್ಗದ್ದೆ ಹಾಗೂ ಅಭಿನಯ್ ಶೆಟ್ಟಿ ತಮ್ಮ ಹುಟ್ಟೂರ ಭಾಷೆಯಲ್ಲಿ ಹಾಡುಗಳನ್ನು ಮಾಡೋಕೆ ಹೊರಟಿರೋದು ನಿಜಕ್ಕೂ ಅಭಿನಂದನಾರ್ಹ. ಅವರ ಕಾರ್ಯ ಯಶಸ್ಸಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮಿಮಿಕ್ರಿ ದಯಾನಂದ್, ಸಿರಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಚಿಕ್ಕಣ್ಣ, ಸಂಪಾದಕರಾದ ಲಲಿತಾನಾರಾಯಣ್ ಸೇರದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ಆಲ್ಬಂ ಪರಿಕಲ್ಪನೆ, ಸಾಹಿತ್ಯ, ಹಾಗೂ ಗಾಯನ ಇವು ಮೂರು ಅಂಶಗಳ ಹೊಣೆ ಹೊತ್ತಿರುವ ಸಂದೀಪ್ ಶೆಟ್ಟಿ ಹೆಗ್ಗದ್ದೆ ಮಾತನಾಡಿ, ಮೊದಲು ನಾವು ಹಾಡುಗಳನ್ನು ಬಿಡುಗಡೆಗೊಳಿಸಿ, ನಂತರ ಅದರ ಚಿತ್ರೀಕರಣವನ್ನು ಮಾಡಬೇಕೆಂದುಕೊಂಡಿದ್ದೇವೆ. ಇದರಲ್ಲಿ ಬಹುತೇಕ ಕುಂದಾಪರದ ಪ್ರತಿಭೆಗಳೇ ಕಾಣಿಸಿಕೊಳ್ಳಲಿದ್ದು, ಹಾಡುಗಳ ನಾಯಕನಾಗಿ ಕುಂದಾಪುರದವರಾದ, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಭಿನಯ್ ಶೆಟ್ಟಿ’ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಹಾಡುಗಳಿಗೆ ಯುವ ಸಂಗೀತ ನಿರ್ದೇಶಕ ಜಸ್ಟಿನ್ ಥಾಮಸ್‌ರ ಸಂಗೀತವಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)
‘ಗಂಡ್ ಹಡಿ ಗಂಡ್’ ಆಲ್ಬಮ್ ಬಗ್ಗೆ ಈಗಾಗಲೇ ಕುಂದನಾಡಿಗರ ಕುತೂಹಲ ಕೆರಳಿಸಿದ್ದರು, ತಮ್ಮೂರಿನ ಹಾಡುಗಳನ್ನು ಅಪ್ಪಿಕೊಳ್ಳಲು ಉತ್ಸುಕರಾಗಿದ್ದಾರೆ. ಹಾಡುಗಳನ್ನು 2016ಕ್ಕೆ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಚಿಕ್ಕಂದಿನಿಂದಲೂ ಬರವಣಿಗೆ ಹಾಗೂ ಗಾಯನ ಎರಡರಲ್ಲೂ ಆಸಕ್ತಿ ಹೊಂದಿದ್ದ ಸಂದೀಪ್ ಈಗ ಕುಂದಾಪುರ ಕನ್ನಡದಲ್ಲಿ ಆಲ್ಬಂ ಮಾಡಲು ಹೊರಟಿರುವುದು ಅಭಿನಂದನಾರ್ಹ. ಇವರ ಈ ಹಾಡುಗಳು ಯಶಸ್ವಿಯಾಗಲಿ ಎನ್ನುವ ಹಾರೈಕೆ ನಮ್ಮದು.