ಮೂಡುಬಿದಿರೆ: ಇಲ್ಲಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಪ್ರಸಿದ್ಧ ಗಾಯಕ ಬೆಂಗಳೂರಿನ ರಘು ದೀಕ್ಷಿತ್ ಅವರಿಂದ ಸಮಕಾಲೀನ ಜನಪದ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು. ವಿಶಾಲವಾದ ವೇದಿಕೆಯಲ್ಲಿ ನಿಂತ ರಘು ದೀಕ್ಷಿತ್ ಹಾಡುತ್ತಿದ್ದರೇ ನೆರೆದಿದ್ದ ಪ್ರೇಕ್ಷಕರು ಅವರ ಸಂಗೀತಕ್ಕೆ ಮನಸೋತು ಆಲಿಸುತ್ತಿದ್ದುದು ಕಂಡುಬಂತು.