ಉಪ್ಪುಂದ: ಕುಂದಾಪುರ ತಾಲೂಕು ಹವ್ಯಕ ಸಭಾ ವಾರ್ಷಿಕೋತ್ಸವ ಹಾಗೂ ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಪ್ರತಿ ಸಂಘನೆಗಳ ಆರಂಭ ಮಾಡುವುದರಿಂದ ಕಾರ್ಯ ಪೂರ್ಣವಾಗದು, ಆದರೆ ಸಂಘಟನೆಗಳು ಬಲಿಷ್ಠವಾದಾಗ ಮಾತ್ರ ಅದರ ಉದ್ದೇಶ ಪೂರ್ಣಗೊಳ್ಳಬಹುದು ಹಾಗೂ ಎಲ್ಲರನ್ನು ಒಳಗೊಂಡಾಗ ಮಾತ್ರ ಸಂಘಟನೆಯ ಪರಿಪೂರ್ಣತೆ ಹೊಂದುತ್ತದೆ ಎಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅಡಳಿತ ಧರ್ಮದರ್ಶಿ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್ ಹೇಳಿದರು.

Call us

Click Here

ಅವರು ಉಪ್ಪುಂದ ಪಠೇಲರ ಮನೆಯಲ್ಲಿ ನಡೆಸಿದ ಕುಂದಾಪುರ ತಾಲೂಕು ಹವ್ಯಕ ಸಭಾದ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ  ಮಂಗಳೂರು ಮಂಡಲದ ಉಪಾಧ್ಯಕ್ಷ ಕಾಕುಂಜೆ ರಾಜಶೇಖರ ಭಟ್ ಮಾತನಾಡಿ, ಸಂಘಟನೆಗಳು ಕಾಲಚಕ್ರದಂತೆ ಏರಿಳಿತಗಳು ಸಾಮಾನ್ಯವಾಗಿರುತ್ತದೆ.  ಅದರ ಉದ್ದೇಶ ಕಾರ್ಯ ತತ್ಪರತೆ ಬಹಳ ಮುಖ್ಯವಾಗಿದ್ದು ದೃಢ ಸಂಕಲ್ಪವಿದ್ದರೆ ಎಲ್ಲಾ ಸಂಘಟನೆಗಳು ಯಶಸ್ಸು ಪಡೆಯಲು ಸಾದ್ಯ ಎಂದು ಹೇಳಿದರು.

ಹವ್ಯಕ ಸಭಾ ಅಧ್ಯಕ್ಷ  ಮಕ್ಕಿ ದೇವಸ್ಥಾನ ನಾಗರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉಪ್ಪುಂದ ಶ್ರೀ ದುರ್ಗಪರಮೇಶ್ವರೀ ದೇವಸ್ಥಾನ ಉಪಾದಿವಂತ ಅರ್ಚಕ ಯು. ಶಂಕರನಾರಾಯಣ ಪುರಾಣಿಕ, ಸಾಧಕ ಶಿಕ್ಷಕಿ ಸೀತಾ ಹೆಗಡೆ ಅವರನ್ನು ಹವ್ಯಕ ಸಭಾ ಪರವಾಗಿ ಸನ್ಮಾಸಿಸಲಾಯಿತು. ಕಳೆದ ಸಾಲಿನ ಎಲ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರಮಥ್ ಶ್ಯಾನುಭೋಗ್, ರಾಜೇಂದ್ರ ಭಟ್, ರಕ್ಷಿತಾ ಭಟ್, ರಾಘವೇಶ್ವರ ಭಟ್, ಮೇಘನಾ ಭಟ್ ಹಾಗೂ ಸುನಿಧಿ ಅವರುಗಳನ್ನು ಅಭಿನಂದಿಸಲಾಯಿತು. ವೆಂಕಟೇಶ ಭಟ್ ಬೈಂದೂರು ಅವರನ್ನು ಗೌರವಿಸಲಾಯಿತು.

Click here

Click here

Click here

Call us

Call us

ಮುಖ್ಯ ಅತಿಥಿಗಳಾಗಿ ಹವ್ಯಕ ವಲಯ ಅಧ್ಯಕ್ಷ ನಾರಾಯಣ ಸ್ವಾಮೀ, ಉದ್ಯಮಿ ಯು. ಪ್ರಭಾಕರ ಭಟ್ ಕುಂದಾಪುರ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹವ್ಯಕ ಸಭಾ ಕಾರ್ಯದರ್ಶಿ ಯು. ಸಂದೇಶ ಭಟ್ ನಿರೂಪಿಸಿ, ವೇದಮೂರ್ತಿ ಶಂಕರನಾರಾಯಣ ಭಟ್ ಸ್ವಾಗತಿಸಿ, ಸತ್ಯನಾರಾಯಣ ಪುರಾಣಿಕ ವಂದಿಸಿದರು.

Leave a Reply