ಮೂಡುಬಿದಿರೆ: ನಮ್ಮ ನಡುವಿನ ಅವಕಾಶವಾದಿ ಪ್ರೌವೃತ್ತಿಯಿಂದ ಜಾತೀಯತೆ ಮತ್ತು ಜಾತ್ಯಾತೀತತೆಗಳ ನಡುವಿನ ಗೊಂದಲ ಹೆಚ್ಚಿತ್ತಿದೆ. ಒಂದು ಧರ್ಮ ಸಂಘಟನೆಯನ್ನು ಮಾತ್ರ ದೂಷಿಸುವುದು ಜಾತ್ಯಾತೀತತೆ ಎಂದೆನಿಸಿಕೊಳ್ಳುವುದಿಲ್ಲ. ಎಲ್ಲಾ ಬಗೆಯ ಸೃಜನ ಪಕ್ಷಪಾತದಿಂದ ಮಾತ್ರ ಜಾತ್ಯಾತೀತರಾಗಲು ಸಾಧ್ಯ ಎಂದು ಪ್ರೊ. ರವೀಂದ್ರ ರೇಷ್ಮೆ ಹೇಳಿದರು.
ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಹೊಸತನದ ಹುಡುಕಾಟ ಎಂಬ ವಿಷಯದಲ್ಲಿ ಮಾತನಾಡಿದರು. ಹೊಸತನವನ್ನು ಆವಹಿಸಿಕೊಳ್ಳುತ್ತಿರುವ ಮಾಧ್ಯಮದಲ್ಲಿ ಮುಖಪುಟಕ್ಕೂ ಜಾಹೀರಾತಿಗೂ ವ್ಯತ್ಯಾಸ ತಿಳಿಯದಷ್ಟು ಬದಲಾವಣೆಗಳಾಗಿದೆ. ಸಂಪಾದಕರ ಹೆಸರನ್ನು ಹುಡುಕುವ ಮಟ್ಟಿಗೆ ಪತ್ರಿಕೆಗಳು ಬದಲಾಗುತ್ತಿವೆ. ಇದಕ್ಕೆ ಖಾಸಗಿ ಕಂಪೆನಿಗಳ ಬಂಡವಾಳಶಾಹಿ ನೀತಿ ಮಾತ್ರವೇ ಕಾರಣವಾಗಿರದೇ ಪತ್ರಕರ್ತನಲ್ಲಿ ಕ್ಷೀಣಿಸುತ್ತಿರುವ ನಾಯಕತ್ವ ಗುಣವೂ ಕಾರಣವಾಗಿದೆ. ಇಂತಹ ನಾಯಕತ್ವವನ್ನು ಧಮನಿಸುವ ಪ್ರವೃತ್ತಿಯ ವಿರುದ್ದ ಎದ್ದು ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದವರು ಹೇಳಿದರು.