ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆಇಇ ( ಮೈನ್ ) 2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 202 ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ಮುಂಬರುವ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್. ಎಸ್. 99.76 ಪರ್ಸೆಟೈಲ್ ಮೂಲಕ ಎಐಆರ್ (ಆಲ್ ಇಂಡಿಯಾ ರ್ಯಾಂಕ್) 733ನೇ ಕೆಟಗರಿ ಪರ್ಸೆಟೈಲ್, ಸಾನಿಕ ಕೆ. ಎನ್ 99.53 ಪರ್ಸೆಟೈಲ್, ಮೋಹಿತ್ ಎಂ. 99.49 ಪರ್ಸೆಟೈಲ್ ಮೂಲಕ 29ನೇ ಕೆಟಗರಿ ರ್ಯಾಂಕ್, ಸುಮಂತ ಗೌಡ ಎಸ್. ಡಿ 99.13 ಪರ್ಸೆಟೈಲ್, ಎಚ್. ಎ. ರಾಜೇಶ್ 99.10 ಪರ್ಸೆಟೈಲ್, ಎಂ. ಮಂಜುನಾಥ್ 99.01 ಪರ್ಸೆಟೈಲ್, ಟಿ. ಪ್ರದೀಪ್ 98.79 ಪರ್ಸೆಟೈಲ್ ಮೂಲಕ 103ನೇ ಕೆಟಗರಿ ರ್ಯಾಂಕ್, ಮೋನಿಕ ಕೆ. ಪಿ 98.54 ಪರ್ಸೆಟೈಲ್ ಮೂಲಕ 126ನೇ ಕೆಟಗರಿ ರ್ಯಾಂಕ್, ಸಾಚಿ ಶಿವಕುಮಾರ್ ಕಡಿ 98.85 ಪರ್ಸೆಟೈಲ್, ತೇಜಸ್ ವಿ. ನಾಯಕ್ 98.71 ಪರ್ಸೆಟೈಲ್, ಹೇಮಂತ್ ಕುಮಾರ್ 98.58 ಪರ್ಸೆಟೈಲ್, ಯೋಗೇಶ್ ದೀಪಕ್ ನಾಯ್ಕ್ 98.52 ಪರ್ಸೆಟೈಲ್, ಆಯುಷ್ ಅರ್ಜುನ್. ಪಿ. 98.43 ಪರ್ಸೆಟೈಲ್, ಗಣೇಶ್ ಜಿ. 98.31 ಪರ್ಸೆಟೈಲ್, ಪ್ರಜ್ವಲ್ ಎಸ್. ಎನ್ 98.23 ಪರ್ಸೆಟೈಲ್, ಪ್ರಜ್ವಲ್ ಪಿ. ನಾಯ್ಕ್ 98.08 ಪರ್ಸೆಟೈಲ್ ಗಳಿಸಿದ್ದಾರೆ.
ಎಚ್. ಎ. ರಾಜೇಶ್ ಭೌತಶಾಸ್ತ್ರದಲ್ಲಿ 100 ಪರ್ಸೆಟೈಲ್‌ಗಳಿಸುವ ಜೊತೆಗೆ ಸುಮಾರು 30 ವಿದ್ಯಾರ್ಥಿಗಳು ವಿಷಯವಾರು 99 ಪರ್ಸೆಟೈಲ್ ಗಿಂತ ಅಧಿಕ ಅಂಕ ಗಳಿಸಿರುತ್ತಾರೆ.
99 ಪರ್ಸೆಟೈಲ್‌ಲಿಗಿಂತ ಅಧಿಕ 06 ವಿದ್ಯಾರ್ಥಿಗಳು, 98ಕ್ಕಿಂತ ಅಧಿಕ 16, 95ಕ್ಕಿಂತ ಅಧಿಕ 54, 90 ಪರ್ಸೆಟೈಲ್ ಗಿಂತ ಮೇಲ್ಪಟ್ಟು 120 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ತಾಂತ್ರಿಕ ವಿದ್ಯಾಲಯಗಳಾದ ಎನ್ಐಟಿ, ಐಐಐಟಿ ಮೊದಲಾದ ಸಂಸ್ಥೆಗಳಲ್ಲಿ ಬಿ. ಇ ಪದವಿಗೆ ಪ್ರವೇಶ ಪಡೆಯುವ ಅವಕಾಶದ ಜೊತೆಗೆ ಐಐಟಿ ಸಂಸ್ಥೆ ಸೇರಲು ಮಾನದಂಡವಾಗಿರುವ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುತ್ತಾರೆ.
ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ದಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆಇಇ (ಮೈನ್) ಪರೀಕ್ಷೆಯ ಸಂಯೋಜಕರಾದ ನಂದೀಶ್ ಎಚ್. ಬಿ, ಆದಿತ್ಯ ವಟಿ ಕೆ. ಮತ್ತು ವಿನಯಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.















