ಸಮಾಜಕ್ಕೆ ಅಗತ್ಯವಾದುದನ್ನು ನೀಡುವ ಬದ್ಧತೆ ಮಾಧ್ಯಮದ್ದು: ಎನ್.ಎ.ಎಂ. ಇಸ್ಮಾಯಿಲ್

Call us

Call us

Call us

ಮೂಡುಬಿದಿರೆ: ಮಾಧ್ಯಮ ಕ್ಷೇತ್ರಕ್ಷೆ ಪ್ರವೇಶಿಸುವ ಸಾಧನಗಳಿಂದಾಗಿ ಹೊಸತನವನ್ನು ನಿರೀಕ್ಷಿಸಲಾಗದು. ಹೊಸತನದ ಹೊಳಪು ಮೊದಲು ಮನಸ್ಸುಗಳಲ್ಲಿ ಮೂಡಬೇಕಿದೆಯೇ ಹೊರತು ಹೊಸ ಸಾಧನಗಳಿಂದಲ್ಲ ಎಂದು ಎನ್.ಎ.ಎಂ. ಇಸ್ಮಾಯಿಲ್ ಹೇಳಿದರು.

Call us

Click Here

ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಹೊಸತನದ ಹುಡುಕಾಟ ಎಂಬ ವಿಷಯದಲ್ಲಿ ಮಾತನಾಡಿದರು. ದೃಶ್ಯ ಮಾಧ್ಯಮಗಳು ಟ್ಯಾಬ್ಲಾಯ್ಡ್ ಪರಂಪರೆಯನ್ನೇ ಪ್ಯಾಕ್ ಮಾಡಿಕೊಡುವ ಕೆಲಸ ಮಾಡುತ್ತಿದೆ. ಆಯ್ದ ವಿಚಾರವನ್ನು ಮಾತ್ರವೇ ಮತ್ತೆ ಮತ್ತೆ ಭಿತ್ತರಿಸುವ ಸಾಧನಗಳಾಗಿ ರೂಪುಗೊಂಡಿವೆ. ಜನರಿಗೆ ಬಯಸುವುದನ್ನೇ ನೀಡುತ್ತಿದ್ದೇವೆ ಮಾಧ್ಯಮಗಳು ಜನರಿಗೆ ಅಗತ್ಯವಾದುದನ್ನು ನೀಡುವ ಬದ್ಧತೆಗೆ ಒಳಗಾಗಬೇಕಿದೆ ಎಂದ ಅವರು ಏಕಮುಖ ಸಂವಹನವನ್ನು ಬಹುಮುಖಿಯಾಗಿಸಿರುವ ಅಂತರ್ಜಾಲ ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಸ್ವರೂಪ ಪಡೆಯದೇ ಉಳಿದಿದೆ ಎಂದರು.

Leave a Reply