ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇವಾಲಯ ಮತ್ತು ಶಾಲೆ ಊರಿನ ಎರಡು ಕಳಶವಿದ್ದಂತೆ. ಮುಖ್ಯವಾಗಿ ಶಾಲೆಗಳು ನಶಿಸಿಹೋದರೆ ಮುಂದಿನ ಪೀಳಿಗೆಗೆ ಸಮಸ್ಯೆಯಾಗಬಹುದು. ಈ ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸುಮಾರು 90 ವರ್ಷ ಇತಿಹಾಸವುಳ್ಳ ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ದಾನಿಗಳಿಂದ ಸಂಗ್ರಹಿಸಿದ ಕೆಲವು ಸವಲತ್ತುಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಇಲ್ಲಿನ ಕಾಲ್ತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 90ರ ಸಂಭ್ರಮ ಹಾಗೂ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಹೆಚ್. ಜಯಶೀಲ ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಿ, ತಮ್ಮ ಸಂಸ್ಥೆಯಿಂದ ಕೊಡುಗೆಯಾಗಿ ನೀಡಿದ ಶಾಲಾ ವಾಹನವನ್ನು ಎಸ್‌ಡಿಎಂಸಿಗೆ ಹಸ್ತಾಂತರಿಸಿದರು.

ಈ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ತಾಪಂ ಮಾಜಿ ಸದಸ್ಯ ಎಚ್. ವಿಜಯ್ ಶೆಟ್ಟಿ, ಸಮೃದ್ಧ ಚಾರಿಟೇಬಲ್ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ, ಪಿಸ್‌ಐ ತಿಮ್ಮೇಶ್ ಬಿ. ಎನ್., ಉದ್ಯಮಿಗಳಾದ ವಾಜುರಾಜ ಶೆಟ್ಟಿ, ಕೃಷ್ಣ ಶೆಟ್ಟಿ, ಸದಾಶಿವ ಶೆಟ್ಟಿ, ಗಣೇಶ ಶೆಟ್ಟಿ, ಮಂಜಯ್ಯ ಶೆಟ್ಟಿ, ವಿಜಯ ಶೆಟ್ಟಿ, ವಿಶ್ವನಾಥ ಶೆಟ್ಟಿ, ಉದಯ ಆಚಾರ್ಯ ಕೂರ್ಸಿ, ಮುತ್ತಯ್ಯ ಶೆಟ್ಟಿ ಪೈನಾಡಿ, ನಾಗರಾಜ ಶೆಟ್ಟಿ ಜಡ್ಕಲ್, ರತ್ನಾಕರ ಕೊಠಾರಿ ಬೈಂದೂರು, ಪರಮೇಶ್ವರ ಭಟ್ ಬೊಳಂಬಳ್ಳಿ, ರವೀಂದ್ರ ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ. ನಾಯ್ಕ್, ರಾಜ್ಯ ಸರ್ಕಾರಿ ನೌಕರರ ಸಂಘ ಬೈಂದೂರು ಘಟಕದ ಅಧ್ಯಕ್ಷ ಶೇಖರ ಪೂಜಾರಿ, ಕಾಲ್ತೋಡು ದೇವಳದ ಆಡಳಿತ ಮೊಕ್ತೇಸರ ಗಣೇಶ ಶೆಟ್ಟಿ, ಅರ್ಚಕ ರಾಮಯ್ಯ ನಿವೃತ್ತ ಅಧ್ಯಾಪಕ ಸೂಲ್ಯಣ್ಣ ಶೆಟ್ಟಿ, ಶಿಕ್ಷಣ ಸಂಯೋಜಕ ಸತ್ಯನಾ ಕೊಡೆರಿ, ಎಸ್‌ಡಿಎಂಸಿ ಅಧ್ಯಕ್ಷ ವಿಜೇಂದ್ರ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘ, ಉತ್ಸವ ಸಮಿತಿ ಅಧ್ಯಕ್ಷ ಗಣೇಶ ಶೆಟ್ಟಿ ಕೂರ್ಸಿ, ಮಾರಿಕಾಂಬಾ ಯುವಕ ಮಂಡಲ ಅಧ್ಯಕ್ಷ ಪ್ರಕಾಶ ಶೆಟ್ಟಿ, ವಿದ್ಯಾರ್ಥಿ ನಾಯಕ ಸಾನಿಕ್ ಇದ್ದರು.
ಸತೀಶ ಭೋವಿ ಸ್ವಸ್ತಿ ವಾಚನಗೈದರು. ಮುಖ್ಯಶಿಕ್ಷಕ ವಿನಾಯಕ ಮೇರ್ಟ ವರದಿ ಮಂಡಿಸಿದರು. ಮಂಜುನಾಥ ಹಿಲಿಯಾಣ ನಿರೂಪಿಸಿ, ಉತ್ಸವ ಸಮಿತಿ ಕಾರ್ಯದರ್ಶಿ ಮಹೇಂದ್ರ ಪೂಜಾರಿ ಯಡೇರಿ ಸ್ವಾಗತಿಸಿ, ಶ್ರೀಧರ ಗಾಣಿಗ ವಂದಿಸಿದರು.
ನಂತರ ಅಂಗನವಾಡಿ, ಶಾಲಾ ವಿದ್ಯಾರ್ಥಿಗಳಿಂದ ನೃತ್ಯವೈಭವ, ತೆಕ್ಕೆಟ್ಟೆ ಕನ್ನಕೆರೆ ಕಲಾಶಕ್ತಿ ತಂಡದವರಿಂದ ಆಟಗಾರ ನಾಟಕ ಪ್ರದರ್ಶನಗೊಂಡಿತು.















