ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ವಡ್ಡರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಬಾಲವನದ ಉದ್ಘಾಟನಾ ಸಮಾರಂಭ ಇತ್ತೀಚಿಗೆ ನಡೆಯಿತು.
ಬಾಲವನವನ್ನು ಶಾಲೆಗೆ ಕೊಡುಗೆಯಾಗಿ ನೀಡಿದ ಓಎನ್‌ಜಿಸಿ ಕಂಪನಿ ಮುಂಬೈ ಇದರ ನಿವೃತ್ತ ಚೀಪ್ ಜನರಲ್ ಮ್ಯಾನೇಜರ್ ನಾರಾಯಣ ಆಚಾರ್ ಬನ್ನಾಡಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಿ ದೈಹಿಕ ಬೆಳವಣಿಗೆಗೆ ಬಾಲವನ ಸಹಕಾರಿಯಾಗಲಿದೆ ಎಂದು ಶಾಲಾ ಸ್ಥಾಪಕ ಮುಖ್ಯೋಪಾಧ್ಯಾಯ ದಿ. ಶಶಿಧರ ಶೆಟ್ಟಿ ಅವರನ್ನು ಸ್ಮರಿಸಿಕೊಂಡರು.
ದಾನಿಗಳಾದ ನಾರಾಯಣ ಆಚಾರ್ ಬನ್ನಾಡಿ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಆಚಾರ್, ದಾನಿಗಳಾದ ಸೀತಾರಾಮ್ ಆಚಾರ್ ಬನ್ನಾಡಿ, ಬಾಲಕೃಷ್ಣ ಶೆಟ್ಟಿ ವಡ್ದರ್ಸೆ, ಚಂದ್ರಶೇಖರ್ ಶೆಟ್ಟಿ ಯಾಳಹಕ್ಲು, ಶುಭೋದಯ ಶೆಟ್ಟಿ ವಡ್ಡರ್ಸೆ, ಹೇಮಲತಾ ಶೆಟ್ಟಿ ವಡ್ದರ್ಸೆ, ಉದಯ್ ಕುಮಾರ್ ಶೆಟ್ಟಿ ಕೊತ್ತಾಡಿ, ವಿಜಯ್ ಕುಮಾರ್ ಶೆಟ್ಟಿ ಕೊತ್ತಾಡಿ, ಪುಷ್ಪಲತಾ ನಾಯಿರಿ, ಇನ್ನರ್ ವೀಲ್ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷೆ ಅಮಿತಾ ಶೆಟ್ಟಿ ವಡ್ಡರ್ಸೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ಪೂಜಾರಿ , ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಗ್ರಾಮದ ಪ್ರಮುಖರಾದ ಚಂದ್ರ ಶೆಟ್ಟಿ ಯಾಳಹಕ್ಲು ಹೇಮಲತಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಗಿರಿಜಾ ಸ್ವಾಗತಿಸಿ, ಅಧ್ಯಾಪಕ ಸತೀಶ್ ವಡ್ಡರ್ಸೆ ನಿರೂಪಿಸಿದರು. ಸಹ ಶಿಕ್ಷಕಿ ಯಶೋಧ ವಂದಿಸಿದರು. ಶಿಕ್ಷಕಿಯರಾದ ಸುಪ್ರೀತಾ ಪ್ರೇಮ ಚೈತ್ರ ಮೀನಾಕ್ಷಿ ಸಹಕರಿಸಿದರು.















