ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಿರಿಯ ದಂತ ವೈದ್ಯ ಡಾ. ಎನ್.ಪಿ. ಕಮಾಲ್ ( 93) ನಿಧನರಾಗಿದ್ದಾರೆ.
ಕುಂದಾಪುರದ ಹಳೆ ಬಸ್ ನಿಲ್ದಾಣದ ವಠಾರದಲ್ಲಿ ದಂತ ವೈದ್ಯಕೀಯ ಕೇಂದ್ರ ಹಾಗೂ ಕನ್ನಡಕ ಮಳಿಗೆ ಹೊಂದಿದ್ದ ಅವರು ಹಿರಿಯ ತಲೆಮಾರಿನ ಜನಪ್ರಿಯ ವೈದ್ಯರಾಗಿದ್ದರು. ರೋಟರಿ ಸಂಸ್ಥೆಯಲ್ಲಿ ರೋಟರಿ ಮಾಜಿ ಅಧ್ಯಕ್ಷ ಹಾಗೂ ರೋಟರಿ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದರು. ವಕ್ವಾಡಿಯಲ್ಲಿ ಕನ್ನಡಕ ಉತ್ಪಾದನಾ ಘಟಕವನ್ನು ಆರಂಭಿಸಿ ಬಹಳ ವರ್ಷ ನಡೆಸಿದ್ದರು.
ಮೂಲತಃ ಉತ್ತರ ಕೇರಳದವರಾಗಿದ್ದು ಅನೇಕ ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದು ನೆಲೆಸಿದ್ದರು. ಅವರು 4 ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.