ಎ.30-ಮೇ.01ರಂದು ಉಡುಪಿಯಲ್ಲಿ ಹದಿನೇಳನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Click Here

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಉಡುಪಿ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ – ‘ಸುಕೃತಿ 2025’ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಎಪ್ರಿಲ್‌ 30ರ ಬುಧವಾರ ಹಾಗೂ ಮೇ 01ರ ಗುರುವಾರದಂದು ನಡೆಯಲಿದೆ. ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ, ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ  ಮಠದ ಆಶ್ರಯದಲ್ಲಿ ಈ ಭಾರಿಯ ಸಾಹಿತ್ಯ ಸಮ್ಮೇಳನ ಎರಡು ದಿನಗಳ ಕಾಲ ಜರುಗಲಿದೆ.

Click Here

Call us

Click Here

ಎಪ್ರಿಲ್‌ 30ರ ಬುಧವಾರ ಬೆಳಿಗ್ಗೆ 08-30ಕ್ಕೆ ಧ್ವಜಾರೋಹಣ, ಬೆಳಿಗ್ಗೆ 09-00ರಿಂದ ಸಮ್ಮೇಳನಾಧ್ಯಕ್ಷರನ್ನು ಎದಿರುಗೊಳ್ಳುವುದು, ಅದೇ ಸಮಯದಲ್ಲಿ ವಿಪಂಚಿ ಬಳಗ ಮಣಿಪಾಲ ಇವರಿಂದ ವೀಣಾವಾಣಿ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟನೆ
ಅಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾಂದಗಳವರು ಹಾಗೂ ಪರ್ಯಾಯ ಶ್ರೀ ಪುತ್ತಿಗೆಮಠದ ಕಿರಿಯ ಸ್ವಾಮೀಜಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾಂದಗಳವರು ದೀಪಬೆಳಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನಡಿಗಳನ್ನಾಡುವರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್‌. ಹೆಬ್ಬಾಳ್ಕರ್‌ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣ ಮಾಡಲಿದ್ದಾರೆ. ಉಡುಪಿ ಶಾಸಕ ಯಶಪಾಲ್‌ ಸುವರ್ಣ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಹಿರಿಯ ವಿದ್ವಾಂಸ ಬಾಬು ಶಿವ ಪೂಜಾರಿ ಅವರು ಮಾತನಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಪೂರ್ವಾಧ್ಯಕ್ಷ ಪುಸ್ತಕ ಬಿಡುಗಡೆಗೊಳಿಸುವರು. ಈ ವೇಳೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ. ಬಳಿಕ ಅಚ್ಯುತ ಪೂಜಾರಿ ಮತ್ತು ಬಳಗದಿಂದ ಗೀತ ಗಾಯನ ನಡೆಯಲಿದೆ.

ಬೆಳಿಗ್ಗೆ 11:30ರಿಂದ ಭಾಷಾ ಸೌಹಾರ್ದ ವಿಷಯವಾಗಿ ಮೊದಲ ವಿಚಾರಗೋಷ್ಠಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಹಿರಿಯ ಸಾಹಿತಿ ವೀರಪ್ಪ ಮೊಯಿಲಿ ಹಾಗೂ ಮಾಜಿ ಸಂಸದ, ಸಾಂಸ್ಕೃತಿಕ ಚಿಂತಕ ಜಯಪ್ರಕಾಶ್‌ ಹೆಗ್ಡೆ ಅವರು ವಿಚಾರ ಮಂಡನೆ ಮಾಡಲಿದ್ದಾರೆ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪ್ರತಿಸ್ಪಂದನೆ ನೀಡಲಿದ್ದಾರೆ. ಈ ವೇಳೆ ಶಿಕ್ಷಣ ಕ್ಷೇತ್ರದಿಂದ ಡಾ. ಲಕ್ಷ್ಮೀನಾರಾಯಣ ಕಾರಣತ್‌, ಸಂಶೋಧನೆ ಕ್ಷೇತ್ರದ ಡಾ. ಸಬಿತಾ ಕೊರಗ, ಅವರಿಗೆ ವಿಚೇಷ ಗೌರವಾರ್ಪಣೆ ನಡೆಯಲಿದೆ.  ಶಿಕ್ಷಕ ನರೇಂದ್ರ ಕುಮಾರ್‌ ಕೋಟ ಅವರು ಸಮನ್ವಯಕಾರರಾಗಿದ್ದಾರೆ. ಬಳಿಕ ಶತಮಾನದ ಸಾಧಕರು ವಿಷಯವಾಗಿ ವಿಶೇಷ ಉಪನ್ಯಾಸ ನಡೆಯಲಿದ್ದು, ಶಾಸನ ಹಸ್ತಪ್ರತಿ ಸಂರಕ್ಷಕ ಎಸ್.‌ವಿ ಕೃಷ್ಣಯ್ಯ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 01:30ರಿಂದ ತಾಳಮದ್ದಳೆ ನಡೆಯಲಿದ್ದು, ಆ ಬಳಿಕ ಡಾ. ಬಿ.ಬಿ. ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜರುಗಲಿದೆ.

ಮಧ್ಯಾಹ್ನ 02:30ರಿಂದ ಎರಡನೇ ವಿಚಾರಗೋಷ್ಠಿ ನಡೆಯಲಿದೆ. ಕರಾವಳಿಯಲ್ಲಿ ಸಾಹಿತ್ಯ ಪರಿಷತ್ತು: ಒಂದು ಅವಲೋಕನ ವಿಷಯದಲ್ಲಿ ಕಸಾಪ ಸ್ಥಾಪಕಾಧ್ಯಕ್ಷ ಎ.ಎಸ್ನ್‌ ಹೆಬ್ಬಾರ್‌ ಸಮನ್ವಯಕಾರರಾಗಿರಲಿದ್ದಾರೆ. ಕೇಂದ್ರ ಕಸಾಪ ಗೌರವ ಕೋಶಾಧಿಕಾರಿ ಬಿ.ಎಂ. ಪಟೇಪ್‌ ಪಾಂಡು ಪ್ರತಿಸ್ಪಂದನ ನೀಡಲಿದ್ದಾರೆ. ಕಸಾಪ ದ.ಕ ಜಿಲ್ಲೆಯ ಅಧ್ಯಕ್ಷ ಡಾ. ಶ್ರೀನಾಥ್‌, ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷ ಬಿ.ಎನ್.‌ ವಾಸರೆ, ಕಾಸರಗೋಡು ಜಿಲ್ಲಾಧ್ಯಕ್ಷ ಡಾ. ಜಯಪ್ರಕಾಶ್‌ ನಾರಾಯಣ್‌ ಭಾಗವಹಿಸಲಿದ್ದಾರೆ. ಈ ಸಂದರ್ಭ ಕಸಾಪ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಉಡುಪಿ ಪೂರ್ಣಪ್ರಜ್ಞ ಕಾಲೇಜು ಹಾಗೂ ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಂಜೆ 05:45ರಿಂದ ಮಠದ ದೈನಂದಿನ ಕಾರ್ಯಕ್ರಮ ಬಳಿಕ ಸಂಜೆ 07:00ರಿಂದ ನೃತ್ಯವಸಂತ ನಾಟ್ಯಾಲಯ ಕುಂದಾಪುರ ತಂಡದಿಂದ ನೃತ್ಯ ಸಿಂಚನ ನಡೆಯಲಿದೆ.

Click here

Click here

Click here

Call us

Call us

ಮೇ 01ರ ಗುರುವಾರ ಬೆಳಿಗ್ಗೆ ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಅರುಣರಾಗ, ಬಳಿಕ ಬೆಳಿಗ್ಗೆ 10:00ರಿಂದ ಕವಿಗೋಷ್ಠಿ ನಡೆಯಲಿದ್ದು, ಜ್ಯೋತಿ ಗುರುಪ್ರಸಾದ್‌ ಅವರು ಸಮನ್ವಯ ಮಾಡಲಿದ್ದಾರೆ. ಬಳಿಕ ನಮ್ಮ ಉಡುಪಿ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಶೈಕ್ಷಣಿಕ ಮನ್ವಂತರ ವಿಷಯವಾಗಿ ಡಾ. ಅಶೋಕ್‌ ಕಾಮತ್‌, ಶಾಸನಗಳ ಸಮೀಕ್ಷೆ ವಿಷಯದಲ್ಲಿ ಡಾ. ಬಿ. ಜಗದೀಶ್‌ ಶೆಟ್ಟಿ, ಚಲನಚಿತ್ರ ಸಾಧನೆ ವಿಷಯದಲ್ಲಿ ಯಾಕೂಬ್‌ ಖಾದರ್‌ ಗುಲ್ವಾಡಿ ಹಾಗೂ ಪ್ರವಾಸೋದ್ಯಮ ವಿಷಯದಲ್ಲಿ ದಯಾನಂದ ಕರ್ಕೆರ ಉಗ್ಗೇಲ್‌ಬೆಟ್ಟು ಮಾತನಾಡಲಿದ್ದಾರೆ.

ಮಧ್ಯಾಹ್ನ ತೆಂಕನಿಡಿಯೂರು ಕಾಲೇಜು ಹಾಗೂ ಶಿರ್ವ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಮಧ್ಯಾಹ್ನ 01ರಿಂದ ಉಪಕುಲಪತಿಗಳೊಂದಿಗೆ ವಿದ್ಯಾರ್ಥಿಗಳ ಮಾತುಕತೆ ನಡೆಯಲಿದ್ದು, ಮಂಗಳೂರು ವಿವಿಯ ಡಾ. ಪಿ.ಎಲ್‌ ಧರ್ಮ ಅವರು ಉಪಸ್ಥಿತರಿರಲಿದ್ದು, ಐದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 02:00ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು ಮಾತುಕತೆ ನಡೆಯಲಿದೆ. ಬಳಿಕ ಬಹಿರಂಗ ಅಧಿವೇಶನ ನಡೆಯಲಿದೆ.

ಸಮಾರೋಪ
ಅಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಪರ್ಯಾಯ ಶ್ರೀ ಪುತ್ತಿಗೆಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಕಿರಿಯ ಸ್ವಾಮೀಜಿಯವರ ಸಾನಿಧ್ಯವಿರಲಿದೆ. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಶಿವರಾಮ ಕಾರಂತ ಟ್ರಸ್ಟ್‌ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ ಸಿ. ಕುಂದರ್‌ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಪಾದೆಕಪ್ಪು ವಿಷ್ಣುಭಟ್ಟ ಪ್ರತಿಸ್ಪಂದನ ನೀಡಲಿದ್ದಾರೆ. ಈ ವೇಳೆ ಸಂಸದರು, ಶಾಸಕರು ಸೇರಿದಂತೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಈ ವೇಳೆ ವಿವಿಧ ಕ್ಷೇತ್ರದ ಸಾಧಕರು ಹಾಗೂ ಸಂಸ್ಥೆಗಳಿಗೆ ಸನ್ಮಾನ ನಡೆಯಲಿದೆ. ಡಾ. ಗಜೇಂದ್ರ ಗುಂಡ್ಮಿ – ಶಿಕ್ಷಣ, ಡಾ. ರವೀಂದ್ರ ಶೆಟ್ಟಿ ಬಜಗೋಳಿ – ಶಿಕ್ಷಣ ಮತ್ತು ಸಂಘಟನೆ, ಪ್ರತಾಪ್‌ ಕುಮಾರ್‌ ಉದ್ಯಾವರ – ಶಿಕ್ಷಣ ಮತ್ತು ಸಮಾಜ ಸೇವೆ, ರಂಗಪ್ಪಯ್ಯ ಹೊಳ್ಳ – ಸಂಕೀರ್ಣ, ಸುಗುಣ ಮೂಲ್ಯ ಪಡುಬಿದ್ರಿ ಕಂಚಿನಡ್ಕ – ಸಮಾಜ ಸೇವೆ, ಉದಯ ಕುಮಾರ್‌ ಶೆಟ್ಟಿ – ಸಂಕೀರ್ಣ, ಕೊಕೂಉ ಸೀತಾರಾಮ ಶೆಟ್ಟಿ – ಯಕ್ಷಗಾನ, ಸೂರಿ ಶೆಟ್ಟಿ ಕಾಪು – ಸಮಾಜಸೇವೆ, ಅಪ್ಪು ಪಾಣಾರ ಶಿರ್ವ – ಪಾಡ್ದನ, ರಾಮಚಂದ್ರ ಆಚಾರ್ಯ ಪಡುಬಿದ್ರಿ – ಪತ್ರಕರ್ತರು, ಪ್ರಸನ್ನ ಶೆಟ್ಟಿಗಾರ್‌ ಮಂದರ್ತಿ – ಯಕ್ಷಗಾನ, ಸೀತಾ ಶ್ರೀನಿವಾಸ ಪಡುವರಿ – ಸಾಹಿತ್ಯ, ಈಶ್ವರ ಮಲ್ವೆ – ಸಮಾಜ ಸೇವೆ, ರವಿ ಕಟಪಾಡಿ – ಸಮಾಜಸೇವೆ, ಯೋಗೀಶ್‌ ಭಟ್‌ ಹಳ್ಳಿ – ಸಂಕೀರ್ಣ, ವಿದುಷಿ ಸಂಸ್ಕೃತಿ ಪ್ರಭಾಕರ – ಯುವ ಪ್ರತಿಭೆ, ಯಡ್ತಾಡಿ ಸತೀಶ್‌ ಕುಮಾರ್‌ ಶೆಟ್ಟಿ – ಪ್ರಗತಿಪರ ಕೃಷಿಕರು, ಸಂಘಸಂಸ್ಥೆಗಳ ವಿಭಾಗದಲ್ಲಿ ಕ್ರಿಯೇಟಿವ್‌ ಪುಸ್ತಕ ಮನೆ, ಭೂಮಿಕಾ ಹಾರಾಡಿ ರಿ. ಪಂಚಮಿ ಟ್ರಸ್ಟ್‌ ರಿ. ಉಡುಪಿ, ಭಾರತೀಯ ರೆಡ್‌ ಕ್ರಾಸ್‌ ಕುಂದಾಪುರ ಶಾಖೆ, ಶ್ರೀ ಜಟ್ಟಿಗೇಶ್ವರ ಯೂತ್‌ ಕ್ಲಬ್‌ ರಿ. ಲೈಟ್‌ ಹೌಸ್‌ ಗಂಗೊಳ್ಳಿ, ಸುನಿಲ್‌ ಬೈಂದೂರು – ಕುಂದಾಪ್ರ ಡಾಟ್‌ ಕಾಂ ಇವರುಗಳಿಗೆ ಸನ್ಮಾನ ನಡೆಯಲಿದೆ.

ಉಡುಪಿ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಲ್ಲಿ ಕಸಭಾ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ನರೇಂದ್ರ ಕುಮಾರ್‌ ಕೋಟ, ಗೌರವ ಕೋಶಾಧ್ಯಕ್ಷ ಪಿ. ಮನೋಹರ ಭಟ್‌ ಅವರು ಆಹ್ವಾನಿಸಿದ್ದಾರೆ.

Leave a Reply