ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಗುರು ಸೇವಾಪರಿಷತ್ ಮಹಾಮಂಡಲ ಇವರ ವತಿಯಿಂದ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ ಸಾಮೂಹಿಕ ಗುರುಪಾದ ಪೂಜೆ ಇಲ್ಲಿನ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ಇತ್ತೀಚಿಗೆ ಜರುಗಿತು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ, ಸನಾತನ ಧರ್ಮದಲ್ಲಿ ಇರುವ ಜಾತಿಗಳು ಕೌಶಲ್ಯ ಆಧಾರಿತವಾಗಿದೆ. ಯಾವಜಾತಿಯೂ ಮೇಲೂ ಅಲ್ಲ ಮತ್ತು ಕೀಳಲ್ಲ ಸಮಾನವೂ ಅಲ್ಲ ತೋಟದಲ್ಲಿ ಇರುವ ನಾನಾ ಹೂವು ಮತ್ತು ಮರಗಳಂತೆ. ದೇಶಮತ್ತು ಧರ್ಮದ ವಿಷಯದಲ್ಲಿ ಎಲ್ಲರೂ ಎಲ್ಲವೂ ಒಂದಾಗಿರಬೇಕು ಎಂದರು.
ಸಮಾಜದ 3 ಮಂದಿ ಸಾಧಕರಾದ ಗಜೇಂದ್ರ ಆಚಾರ್ಯ ಅಂಕದಕಟ್ಟೆ, ಉದಯ ಆಚಾರ್ಯ ಕುಂದಾಪುರ, ಅಶೋಕ ಆಚಾರ್ಯ ಕುಂದಾಪುರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಲೋಲಾಕ್ಷ ಶರ್ಮ, ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶಣೈ, ಗುರು ಸೇವಾಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ರಥ ಶಿಲ್ಪಿ ರಾಜಗೋಪಾಲ್ ಆಚಾರ್ಯ, ಭವಾನಿ ನಾರಾಯಣ ಆಚಾರ್ಯ, ತ್ರಾಸಿ ಸುಧಾಕರ ಆಚಾರ್ಯ, ಶ್ರೀಧರ್ ದಾಸ್‌ಜೀ, ಕುಂಭಾಶಿ, ಶ್ರೀಧರ ಆಚಾರ್ಯ ಬೀಜಾಡಿ, ರಮಾನಂದ ಆಚಾರ್ಯ, ರಾಘವೇಂದ್ರ ಆಚಾರ್ಯ ಕಾರವಾರ, ಉದಯ ಆಚಾರ್ಯ ಹುಚ್ಕೆರೆ ಸೇರಿದಂತೆ ಅನೇಕ ಗಣ್ಯರು,ದಾನಿಗಳು ಉಪಸ್ಥಿತರಿದ್ದರು.
ಲಕ್ಷ್ಮೀನಾರಾಯಣ ಆಚಾರ್ಯ ಪ್ರಾರ್ಥಿಸಿ, ಗುರುಸೇವಾ ಪರಿಷತ್‌ನ ಅಧ್ಯಕ್ಷ ಕೇಶವ ಆಚಾರ್ಯ ಕುಂಭಾಶಿ ಸ್ವಾಗತಿಸಿ, ನಾಗೇಂದ್ರ ಆಚಾರ್ಯ ನಿರೂಪಿಸಿ, ಶಶಿಧರ ಆಚಾರ್ಯ ಬಂಡಾಡಿ ವಂದಿಸಿದರು.















