ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ‘ಫೀಡರ್ ವ್ಯಾಪ್ತಿ ಪ್ರದೇಶಕ್ಕೆ ಒಳಪಟ್ಟಿರುವ ಗಂಗೊಳ್ಳಿ, ತ್ರಾಸಿ, ಗುಜ್ಜಾಡಿ, ಮುಳ್ಳಿಕಟ್ಟೆ ಹೊಸಾಡು, ಮೊವಾಡಿ, ಅರಾಟೆ, ನಾಯಕವಾಡಿ, ಕಂಚುಗೋಡು ಭಾಗದಲ್ಲಿ ಕಳೆದ ಒಂದು ವಾರದಿಂದ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿದ್ದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸಾರ್ವಜನಿಕರಿಗೆ ಯಾವುದೇ ರೀತಿ ಮಾಹಿತಿ ನೀಡದೆ ಬಿರು ಬೇಸಿಗೆ ಸಮಯದಲ್ಲಿ ಅನಿಮಿತವಾಗಿ ವಿದ್ಯುತ್ ಕಡಿತಗೊಳಿಸುತ್ತಿದ್ದರಿಂದ ತಾಪಮಾನದ ಬಿಸಿ ತಾಳಲಾರದೆ ಮಕ್ಕಳು, ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರು, ಹಿರಿಯ ನಾಗರಿಕರು ಸಂಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯುತ್ ಕಡಿತದಿಂದ ವ್ಯಾಪರಸ್ಥರು ಹೈರಾಣಾಗಿ ಹೋಗಿದ್ದಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಲೋಡ್ ಶೆಡ್ಡಿಂಗ್ ಸಹಿತ ಅನಿಯಮಿತ ವಿದ್ಯುತ್ ನಿಲುಗಡೆಯನ್ನು ಕೈ ಬೀಡಬೇಕೆಂದು ಮಾಜಿ ಜಿ.ಪಂ ಸದಸ್ಯ ಅನಂತ ಮೊವಾಡಿ ಆಗ್ರಹಿಸಿದ್ದಾರೆ.