ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ ಸೂಕ್ತವಾಗಿರುವ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಗೇರು, ಮಲ್ಲಿಗೆ, ಅಂಗಾಂಶ ಬಾಳೆ, ಅಪ್ರಧಾನ ಹಣ್ಣಿನ ಬೆಳೆಗಳಾದ ಡ್ರಾö್ಯಗನ್ ಫ್ರೂಟ್, ರಾಂಬೂತನ್ ಹಾಗೂ ಸಾಂಬಾರು ಬೆಳೆಗಳಾದ ಕಾಳುಮೆಣಸು, ಜಾಯಿಕಾಯಿ, ದಾಲ್ಚಿನ್ನಿ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿರುತ್ತದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಆಸಕ್ತ, ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ, ಉದ್ಯೋಗ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಪ್ರತಿ, ಸಣ್ಣ ರೈತರ ದೃಢೀಕರಣ ಪತ್ರ/ ಬಿ.ಪಿ.ಎಲ್ ಕಾರ್ಡ್/ ಜಾತಿ ಪ್ರಮಾಣ ಪತ್ರ ಇವುಗಳ ಛಾಯಾ ಪ್ರತಿ ಹಾಗೂ ಗ್ರಾಮ ಪಂಚಾಯತಿಯಿಂದ ಪಡೆದ ಶಿಫಾರಸ್ಸು ಪತ್ರ ಸೇರಿದಂತೆ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಸಮೀಪದ ಗ್ರಾಮ ಪಂಚಾಯತಿ ಅಥವಾ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಎಂ.ಜಿ.ಎನ್.ಆರ್.ಇ.ಜಿ.ಎ (ಒಉಓಖಇಉಂ) ತಾಂತ್ರಿಕ ಸಹಾಯಕಿ ಮಮತಾದೇವಿ ಮೊ.ಸಂಖ್ಯೆ 9845936837, ಕೋಟ ಸಹಾಯಕ ತೋಟಗಾರಿಕಾ ಅಧಿಕಾರಿ ಪವಿತ್ರ ರಾಜೇಶ್ ಮೊ.ಸಂಖ್ಯೆ: 9008284192 ಹಾಗೂ ಉಡುಪಿ ಸಹಾಯಕ ತೋಟಗಾರಿಕಾ ಅಧಿಕಾರಿ ರಾಹುಲ್ ನಾಶಿಪುಡಿ ಮೊ.ಸಂಖ್ಯೆ: 8527225123 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.