ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣದ ಗುಣಮಟ್ಟ, ಶಿಸ್ತಿನ ವಾತಾವರಣ ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಹೆಸರು ವಾಸಿಯಾದ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿ 2024- 25ನೇ ಶೈಕ್ಷಣಿಕ ವರ್ಷದಲ್ಲಿ ಐಸಿಎಸ್ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.
ವಿದ್ಯಾರ್ಥಿಗಳಾದ ದೀಕ್ಷಾ ಕೋರಿ 98.80% ಅಂಕದೊಂದಿಗೆ ಪ್ರಥಮ ಸ್ಥಾನ, ನಿಧಿ ಶೆಟ್ಟಿ 98.60% ದ್ವಿತೀಯ ಸ್ಥಾನ ಹಾಗೂ ಹರ್ಷಿತಾ ಎಸ್. ಪೂಜಾರಿ 98.20% ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಈ ಶಾಲೆ, ಕಳೆದ 22 ವರ್ಷದಿಂದ ನೂರಕ್ಕೆ ನೂರು ಫಲಿತಾಂಶ ದಾಖಲಿಸಿರುವ ಸಾಧನೆ ಮಾಡಿರುವುದು ತಾಲೂಕಿನ ಏಕೈಕ ಐಸಿಎಸ್ಇ ಪಠ್ಯಕ್ರಮದ ಶಾಲೆ ಇದಾಗಿದೆ. ಈ ವಿದ್ಯಾ ಸಂಸ್ಥೆಯಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ಸುಮಾರು 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಈ ವಿದ್ಯಾರ್ಥಿಗಳಲ್ಲಿ 660 ಮಕ್ಕಳಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ, ಪಾಠಶಾಲೆ, ಶೈಕ್ಷಣಿಕ ನೆರವು, ಶಿಸ್ತು – ಎಲ್ಲವನ್ನೂ ಒಟ್ಟಿಗೆ ನೀಡುತ್ತಿರುವ ಈ ಸಂಸ್ಥೆ ಈ ಭಾಗದ ಮಾದರಿ ವಸತಿ ಶಾಲೆಯಾಗಿ ಹೊರಹೊಮ್ಮಿದೆ.
ಈ ವರ್ಷ 237 ವಿದ್ಯಾರ್ಥಿಗಳು ಐಸಿಎಸ್ಇ 10ನೇ ವರ್ಗದ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 139 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 98 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳ ನಿರಂತರ ಸಾಧನೆ ಶಾಲೆಯ ಮಾದರಿಯ ಶಿಕ್ಷಣ ತಂತ್ರ, ಶಿಸ್ತಿನ ಪರಿಸರ ಹಾಗೂ ಶಿಕ್ಷಕರ ದಿಟ್ಟ ಸಮರ್ಪಣೆಯ ಫಲದಿಂದ ಈ ಸಾಧನೆ ಸಾಧ್ಯವಾಗಿದೆ. ಇಂತಹ ಫಲಿತಾಂಶವು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ, ಈ ಸಾಧನೆಯ ಹಿಂದೆ ನಿಂತಿರುವುದು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ನಿರಂತರ ಸಹಕಾರ ನೀಡಿದ ಪೋಷಕರ ಭರವಸೆಯೇ ಕಾರಣವೆಂದು ಶಾಲೆಯ ಪ್ರಾಂಶುಪಾಲರೂ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಅವರು ಈ ಗೌರವವನ್ನು ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.















