ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆ 2024-25ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 229 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ತೆರ್ಗಡೆ ಹೊಂದಿ ಶೇಕಡಾ100 ಫಲಿತಾಂಶ ದಾಖಲಿಸಿರುತ್ತಾರೆ.
ಹರಿಪ್ರಸಾದ್ ಎಮ್.ಎಸ್., ಸಾಯಿ ಕೀರ್ತನಾ 622 ಅಂಕ ಪಡೆದು ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಗಳಿಸಿರುತ್ತಾರೆ. ಆಕಾಂಕ್ಷ ಎಸ್. ಪೈ, ಅಮೂಲ್ಯ ಶೇಟ್, ಶರ್ವಾಣಿ ಉಳವಿ, ಶ್ರೇಯಾ 621 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಹಾಗೂ ರಾಜ್ಯಮಟ್ಟದಲ್ಲಿ 5ನೇ ಸ್ಥಾನ ಗಳಿಸಿರುತ್ತಾರೆ ಮತ್ತು ಆಸ್ತಿಕ್ ಕೆ., ಮಂಜುಶ್ರೀ ಕೆ.ಪಿ., ನೇಹಾ ಆರ್., ಸಮೃದ್ಧಿ ನಾಯಕ್ ಕ್ರಮವಾಗಿ 620 ಅಂಕಗಳಿಸಿ ತೃತೀಯ ಸ್ಥಾನ ಮತ್ತು ರಾಜ್ಯ ಮಟ್ಟದಲ್ಲಿ ಆರನೇ ಸ್ಥಾನ ಗಳಿಸಿರುತ್ತಾರೆ.
229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 59 ವಿದ್ಯಾರ್ಥಿಗಳು 600 ಕ್ಕಿಂತ ಅಧಿಕ ಅಂಕ ಗಳಿಸಿರುತ್ತಾರೆ. 115 ವಿದ್ಯಾರ್ಥಿಗಳು A+ ಶ್ರೇಣಿಯಲ್ಲಿ , 66 ವಿದ್ಯಾರ್ಥಿಗಳು A ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು B+, 14 ವಿದ್ಯಾರ್ಥಿಗಳು B ಹಾಗೂ 4 ವಿದ್ಯಾರ್ಥಿಗಳು c+ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದು ಶೇ. 100 ಫಲಿತಾಂಶ ಪಡೆದಿರುತ್ತಾರೆ.