ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಶೇ.98.27 ಫಲಿತಾಂಶ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳಾದ ಸುಶ್ಮಿತಾ ಎಸ್. ಗಾಣಿಗ (624), ಮನಾಲಿ (619), ವೈಷ್ಣವಿ (611), ಅಭಿಜ್ಞಾ ಖಾರ್ವಿ (610), ಧನ್ಯ ಮೇಸ್ತ (610), ಸೃಜನಾ (603), ವಿಕ್ರಮ್ ವಿ. ದೇವಾಡಿಗ (600), ಪ್ರಾರ್ಥನಾ ಪೈ (596), ಶ್ರೀಯಾ ಖಾರ್ವಿ (595), ಅಶ್ವಿತಾ ಎಸ್.ಮೊಗವೀರ (588), ಸಹನಾ ಆರ್.ಮೇಸ್ತ (580), ಬಿ. ಅಪೂರ್ವ ನಾಯಕ್ (580) ಉತ್ತಮ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಹಾಜರಾದ 58 ವಿದ್ಯಾರ್ಥಿಗಳ ಪೈಕಿ 57 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 30 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 624 ಅಂಕಗಳನ್ನು ಪಡೆದಿರುವ ಸುಶ್ಮಿತಾ ಎಸ್. ಗಾಣಿಗ ಶಾಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯದಲ್ಲಿ 2ನೇ ರ‍್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.