ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಯೋಧರ ಯಶಸ್ವಿಯ ಕಾರ್ಯಾಚರಣೆಗಾಗಿ ಹಾಗೂ ಸೇನೆಯ ಶಕ್ತಿ ಇನ್ನಷ್ಟು ಹೆಚ್ಚಲಿ ಎಂದು ಸಮಸ್ತ ವೀರ ಯೋಧರಿಗಾಗಿ ವಿಶೇಷ ಪೂಜಾ ಕಾರ್ಯಕ್ರಮ ಇಂದು ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ನೇತೃತ್ವದಲ್ಲಿ ಪೆಹೆಲ್ಗಾಂ ಅಮಾಯಕರ ಹತ್ಯೆಮಾಡಿದ ಪಾಕಿಸ್ಥಾನದ ಪಾಪಿಗಳ ಮೇಲೆ ಪ್ರತಿಕಾರ ಮಾಡಿದ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರದ ಕಾರ್ಯದ ಅಂಗವಾಗಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆನೆಗುಡ್ಡೆ ಕುಂಬಾಶಿಯಲ್ಲಿ ಭಾರತೀಯ ಯೋಧರ ಯಶಸ್ವಿಗಾಗಿ ಪೂಜಾಕಾರ್ಯ ನೆರವೇರಿತು.

ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ,, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್.ಕೆ.ಎಸ್., ಮಂಡಲ ಉಪಾಧ್ಯಕ್ಷರಾದ ಪ್ರಕಾಶ್ ಜಿ. ಪೂಜಾರಿ, ಸುನಿಲ್ ಶೆಟ್ಟಿ ಹೇರಿಕುದ್ರು, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರ್, ಅನಿತಾ ಶ್ರೀಧರ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ, ಮಂಡಲ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ನೇತ್ರಾವತಿ ಮಡಿವಾಳ,, ಮನೀಶ್ ಬೀಜಾಡಿ,, ಓಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್, ಯುವ ಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ್, ಮಹಿಳಾ ಮೋರ್ಚಾ ದ ಕಾರ್ಯದರ್ಶಿ ರೋಹಿಣಿ ಪೈ, ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಆಚಾರ್ಯ, ಉಪಾಧ್ಯಕ್ಷ ಭಾಸ್ಕರ್ ಕುಂಬ್ರಿ, ಪಕ್ಷದ ಪ್ರಮುಖರಾದ ಮಂಜುನಾಥ್ ಕಾಮತ್ ಕುಂಭಾಶಿ, ಮಹೇಶ್ ಶೆಣೈ , ದಿವಾಕರ ಕಡ್ಗಿ, ರತ್ನಾಕರ ಶೇರಿಗಾರ್, ಸತೀಶ್ ಶೆಟ್ಟಿ, ನಾಗರಾಜ್ ಕಾಂಚನ, ರಾಘವೇಂದ್ರ ಕೊರವಾಡಿ, ವಿನೋದ್ ಬಂಗೇರ, ಆನಂದ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.