ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿ ಭಾಗದ ಪ್ರಖ್ಯಾತ ಸರ್ಜಿಕಲ್ಸ್ ಸಂಸ್ಥೆಯಾದ ಗಿರಿಜಾ ಸರ್ಜಿಕಲ್ಸ್ ಮತ್ತು ಸೀನಿಯರ್ ಜೇಸಿ ಟೆಂಪಲ್ ಸಿಟಿ ಉಡುಪಿ ಲಿಜಿನ್ ಇವರ ವತಿಯಿಂದ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತಿರುವ ದಾದಿಯರನ್ನು ಗುರುತಿಸಿ ಗೌರವಿಸು ನೆಲೆಯಲ್ಲಿ ದಾದಿಯರ (ನರ್ಸಸ್) ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ 5 ಜನ ದಾದಿಯರನ್ನು ಸನ್ಮಾನಿಸಿ ಉಳಿದ ಎಲ್ಲಾ ದಾದಿಯರನ್ನು ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯುತು.

ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಸರ್ಜಿನ್ ಆಗರುವ ಡಾ. ಅಶೋಕ್ ಅವರು, ಆಸ್ಪತ್ರೆಯ ಆರ್‌ಎಮ್‌ಒ ಆಗಿರುವ ಡಾ. ವಾಸುದೇವ, ಸೀನಿಯರ್ ಜೇಸಿಯ ಅಧ್ಯಕ್ಷ ಶಿವಾನಂದ್ ಶೆಟ್ಟಿಗಾರ್ ಮತ್ತು ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ನ ಮೆನೆಜಿಂಗ್ ಡೈರೆಕ್ಟರ್ ಆಗಿರುವ ರವೀಂದ್ರ ಶೆಟ್ಟಿ ಕಡೆಕಾರ್, ಆಸ್ಪತ್ರೆಯ ನರ್ಸಿಂಗ್ ಸುಪಾರಿಟೆಂಡೆಂಟ್ ರತ್ನವತಿ, ಸೀನಿಯರ್ ಜೇಸಿಯ ಸದಸ್ಯರು ಮತ್ತು ಗಿರಿಜಾ ಸರ್ಜಿಕಲ್ಸ್ ನ ಸಹೋದ್ಯೋಗಿ ಗಳು ಉಪಸ್ಥಿತರಿದ್ದರು.
ಇದೇ ರೀತಿ ಸಂಸ್ಥೆಯ ವತಿಯಿಂದ ಕುಂದಾಪುರ ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆ ಗಳಲ್ಲಿಯ ದಾದಿಯರ ದಿನಾಚರಣೆಯನ್ನು ಆಚರಿಸಿ ಅವರನ್ನು ಗೌರವಿಸಲಾಯಿತು.