ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ವತ್ತಿನಣೆ ಗ್ರಾಮದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ವೃಂದಾವನ ಪುನಃ ಪ್ರತಿಷ್ಠೆ- ಶತಕಲಶಸಹಿತ ಬ್ರಹ್ಮಕಲಶೋತ್ಸವವು ಮೇ.25 ರವಿವಾರದಿಂದ ಮೇ.29 ಗುರುವಾರ ತನಕ ಜರುಗಲಿದೆ ಎಂದು ವತ್ತಿನಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ವೃಂದಾವನ ಟ್ರಸ್ಟ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಅವರು ವತ್ತಿನಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ವೃಂದಾವನ ಪುನಃ ಪ್ರತಿಷ್ಠೆ – ಮಹಾಅನ್ನಸಂತರ್ಪಣೆ, ಶ್ರೀ ಆಂಜನೇಯ ಶ್ರೀ ನವಗ್ರಹ ಗುರು ಸಾರ್ವಭೌಮರ ವೃಂದಾವನಕ್ಕೆ ಶತಕಲಶಸಹಿತ ಬ್ರಹ್ಮಕಲಶೋತ್ಸವ-ಮಹಾಅನ್ನಸಂತರ್ಪಣೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಮೇ.25ರಂದು ವೈಶಾಖ ಕೃಷ್ಣ ತ್ರಯೋದಶೀ ಪೂಜೆ ನಡೆಯಲಿದೆ. ಸಾಯಂಕಾಲ ಗಂಟೆ 5.00 ರಿಂದ ಋತ್ವಿಜರ ಸ್ವಾಗತ, ಶಿಲ್ಪಿ ಪೂಜೆ, ಆಲಯ ಪ್ರತಿಗ್ರಹ, ಮಹಾಪ್ರಾರ್ಥನೆ, ತೋರಣ ಮೂಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಗೋಪ್ರವೇಹ, ಪಂಚಗವ್ಯ, ವಾಸ್ತು ಪೂಜೆ, ಭೂಶುದ್ಧಿ ಹೋಮ, ವಾಸ್ತುಯಾಗ, ರಾಕ್ಷೋಘ್ನ ಹೋಮ, ದಿಕ್ಪಾಲ ಬಲಿ, ಶ್ರೀ ನಾಗದೇವರ ಕ್ಷೇತ್ರದಲ್ಲಿ ವಾಸ್ತು ವಿಧಿ ಹಾಗೂ ರಾತ್ರಿ ಅನ್ನಸಂಪರ್ಪಣೆ ನಡೆಯಲಿದೆ.
ಮೇ.26 ರಂದು ವೈಶಾಖ ಕೃಷ್ಣ ಚತುರ್ದರ್ಶೀ ಪುಣ್ಯಾಹ್ನ, ದೇವನಾಂದಿ, ಕಂಕಣಬಂಧ, ಶ್ರೀ ಮಹಾಗಣಪಯಾಗ, ಸಂಜೀವಿನಿ ಮಹಾಮೃತ್ಯುಂಜಯ ಯಾಗ ಹಾಗೂ ಮಧ್ಯಾಹ್ನ ಅನ್ನಸಂಪರ್ಪಣೆ ನಡೆಯಲಿದೆ. ಸಾಯಂಕಾಲ ಗಂಟೆ 5.00 ರಿಂದ ಮಹಾಸುದರ್ಶನ ಯಾಗ, ಭೂವರಾಹ ಹೋಮ, ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಅಂದು ಸಂಜೆ 5.00 ರಿಂದ ಮಹಿಳಾ ತಂಡಗಳಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ಜರುಗಲಿದೆ.

ಮೇ.27 ರಂದು ವೈಶಾಖ ಕೃಷ್ಣ ಅಮವಾಸ್ಯೆ , ಬೆಳಿಗ್ಗೆ 8.00 ರಿಂದ ನವಗ್ರಹಯಾಗ, ಪುರುಷ ಸೂಕ್ತ ಯಾಗ, ವಾಯುಸ್ತುತಿ ಹೋಮ ಶ್ರೀ ಆಂಜನೇಯ, ಶ್ರೀ ನವಗ್ರಹ ದೇವರಿಗೆ 48 ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಶ್ರೀ ನಾಗದೇವರು ಮತ್ತು ಕ್ಷೇತ್ರಪಾಲ ದೇವರ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ. ಸಾಯಂಕಾಲ ಗಂಟೆ 5.ರಿಂದ ವಿಷ್ಣುಚಕ್ರಾಭ್ಚಪೂಜೆ, ಆಶ್ಲೇಷಾ ಬಲಿ ನಡೆಯಲಿದೆ. ಅಂದು ಸಂಜೆ 6.00 ರಿಂದ ಆಹ್ವಾನಿತ ಮಹಿಳಾ ಮತ್ತು ಪುರುಷ ತಂಡಗಳಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ.
ಮೇ.28 ರಂದು ಜೈಷ್ಠ ಶುಕ್ಲ ದ್ವಿತೀಯಾ ಬೆಳಿಗ್ಗೆ ವಾಯುಸ್ತುತಿ ಹೋಮ, ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ವಿಷ್ಣ ಸೂಕ್ತ ಹೋಮ, ಅಷ್ಟಾಕ್ಷರ ಮಂತ್ರ ಹೋಮ, ಶ್ರೀ ರಾಮ ಯಜ್ಣ ಗಂಟೆ 8.05ಕ್ಕೆ ಶ್ರೀ ಪೇಜಾವರ ಮಠಾಧೀಶದಿಂದ ವೃಂದಾವನ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ಮಠದ ಮಟ್ಟ ದೇವರ ಪೂಜೆ, ಶ್ರೀಗಳಿಂದ ಆರ್ಶೀವರ್ಚನ ಫಲ ಮಂತ್ರಾಕ್ಷತೆ ನಡೆಯಲಿದೆ. ಗಂಟೆ 12.00ಕ್ಕೆ ಮಹಾಪೂಜೆ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಗಂಟೆ 5.00ರಿಂದ ಶ್ರೀ ರಾಮ ಭದ್ರಕ ಮಂಡಲ ಪೂಜೆ ನಡೆಯಲಿದೆ. ಅಂದು ಸಂಜೆ 7.00ರಿಂದ ಸುರಭಿ ರಿ. ಬೈಂದೂರು ಮತ್ತು ಸೇವಾ ಸಂಗಮ ಶಿಶು ಮಂದಿರ ಬೈಂದೂರು ಇವರಿಂದ ಯಕ್ಷ – ನಾಟ್ಯ- ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ಮೇ.29 ರಂದು ಜ್ಯೇಷ್ಠ ಶುಕ್ಲ ತೃತೀಯಾ, ಬೆಳಗ್ಗೆ ಪುಣಾಹ್ನ, ಶತಕಲಕ ಸಹಿತ ಬ್ರಹ್ಮ ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಗಂಟೆ 10.15ಕ್ಕೆ ಶ್ರೀ ಚಿತ್ರಾಪುರ ಮಠಾಧೀಶರಿಂದ ವೃಂದಾವನಕ್ಕೆ ಶತಕಲಶ ಸಹಿತ ಬ್ರಹ್ಮಕಲಶೋತ್ಸವ, ಮಹಾಪೂಜೆ, ಶ್ರೀ ಪಾದರ ಪಟ್ಟದೇವರ ಪೂಜೆ, ಆರ್ಶೀರ್ವಚನ, ಫಲಮಂತ್ರಾಕ್ಷತೆ, ಗಂಟೆ 11.00ಕ್ಕೆ ಪಲ್ಲ ಪೂಜೆ, ಗಂಟೆ 12.00ಕ್ಕೆ ಮಹಾಪೂಜೆ, 12.30 ರಿಂದ ಮಹಾಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ 6.00 ರಿಂದ ಶ್ರೀ ದೇವಿ ಲಲಿತ ಕಲಾ ವೃಂದ ಕಾರ್ಕಳ ತಂಡದವರಿಂದ ಕಿರು ಮಂತ್ರಾಲಯ ಖ್ಯಾತಿಯ ಬೈಂದೂರು ಒತ್ತಿನೆಣೆ ಗುರುರಾಯರ ಸನ್ನಿದಾನದಲ್ಲಿ ದಕ್ಷಯಜ್ಞ ಯಕ್ಷಗಾನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಬೈಂದೂರು ವತ್ತಿನಣ್ಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಬ್ರಾಂದಾವನ ಟ್ರಸ್ಟ್ ಅಧ್ಯಕ್ಷರಾದ ಸುಲಿಯಣ್ಣ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಸದಸ್ಯರಾದ ದಿನೇಶ್ ಕೆ., ರವೀಂದ್ರ ಶ್ಯಾನಭಾಗ, ನಾಗರಾಜ್ ದೇವಾಡಿಗ, ಮಂಜುನಾಥ ಎಲ್., ದಿನಕರ್ ಶೆಟ್ಟಿ, ಸೋಮಶೇಖರ್, ವಿವಿಧ ಸಮಿತಿಗಳ ಸಂಚಾಲಕರು ಮತ್ತು ಸಹ ಸಂಚಾಲಕರಾದ ನಾಗಯ್ಯ ಶೆಟ್ಟಿ, ಶಿವಾನಂದ್ ಮದ್ದೋಡಿ, ಅಣ್ಣಪ್ಪ ಪೂಜಾರಿ ಯಡ್ತರೆ, ಗಿರೀಶ್ ಶೇಟ್ ಉಪ್ಪುಂದ, ಜನಾರ್ದನ್ ಪಟ್ವಾಲ್, ಪ್ರದೀಪ್ ಶೆಟ್ಟಿ, ಮುತ್ತಯ್ಯ ಪೂಜಾರಿ ಸಸಿಹಿತ್ಲು, ಸುನಿಲ್ ಎಚ್‌ಜಿ, ಗೋಪಾಲ ಗಾಣಿಗ ಬಂಕೇಶ್ವರ, ಮಂಜುನಾಥ್ ಶೇಟ್, ಸುಬ್ರಯ ನಾವುಂದ, ಮುರುಳಿ ಭಟ್, ಚಂದ್ರ ಕೂರಾಡಿ, ಪ್ರಭಾಕರ್ ಬಿಲ್ಲವ, ಶಿವರಾಜ್ ಸಂದೇಶ್ ಭಟ್ ಉಪ್ಪುಂದ ಮೂದಲಾದವರು ಉಪಸ್ಥಿತರಿದ್ದರು.















