ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಉಪ್ಪುಂದ ಪರಿಚಯ ಹೋಟೆಲ್‌ನ ಕೊಠಡಿಯಲ್ಲಿ ಇತ್ತೀಚಿಗೆ ಕಳವು ನಡೆದಿದೆ.
ಬಿಜೂರು ನಿವಾಸಿ ಮಾಲತಿ ಎಂಬವರು ಹೋಟೆಲ್‌ನ ರೂಮ್‌ನಲ್ಲಿ ವಾಸ್ತವ್ಯ ಮಾಡಿ ಕೊಂಡಿದ್ದು, ಮೇ. 8ರಂದು ತಾಯಿ ಮನೆಗೆ ಬಿಜೂರಿಗೆ ಹೋಗಿದ್ದರು. ವಾಪಸ್ ಬಂದು ನೋಡುವಾಗ ಕೊಠಡಿಯ ಕಪಾಟಿನಲ್ಲಿರಿಸಿದ್ದ 10 ತೊಲೆ(100 ಗ್ರಾಂ) ಚಿನ್ನದ ಕರಿಮಣಿ ಸರ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಸಿಸಿಟಿವಿ ಪರಿಶೀಲಿಸಿದಾಗ ಹೋಟೆಲ್‌ನ 2ನೇ ಮಹಡಿಯ ಕೊಠಡಿಯಲ್ಲಿದ್ದ ವ್ಯಕ್ತಿಯೊಬ್ಬ ಮಧ್ಯಾಹ್ನ 2.20ರ ಹೊತ್ತಿಗೆ ಮಾಲತಿ ಅವರ ಕೊಠಡಿಯಲ್ಲಿ ಹೋಗಿ ಬಂದ ದೃಶ್ಯ ಸೆರೆಯಾಗಿದೆ.
ಈ ಬಗ್ಗೆ ಬೈಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










