ಮೂಡುಬಿದಿರೆ: ಶಿಸ್ತು, ಶ್ರೇದ್ಧೆ, ಕೀಯಾಶೀಲತೆ, ಏಕ ಕಾಲದಲ್ಲಿ ಹಲವಾರು ಕಾರ್ಯ ಮಾಡುವ ಮನೋಭಾವ, ಸತ್ಯವನ್ನು ಸಂಶೋಧಿಸುವ ಸಾಹಿತಿ, ಸಂಶೋಧಕ ನಾಡೋಜ ಡಾ. ಎಂ.ಎಂ. ಕರ್ಲ್ಬುಗಿ ಅಭಿವ್ಯಕ್ತಿ ಸ್ವತಂತ್ರ್ಯದ ರೂಪಕ ಎಂದು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು.
ಇಲ್ಲಿನ ನುಡಿಸಿರಿ 2015ರಲ್ಲಿ ‘ಸಂಸ್ಮರಣೆ: ನಾಡೋಜ ಡಾ. ಎಂ.ಎಂ. ಕರ್ಲ್ಬುಗಿ ನೆನಪು’ ಕುರಿತು ಮಾತನಾಡುತ್ತಾ ವಿದ್ಯುನ್ಮಾನ ಮಾಧ್ಯಮಗಳು ಕುಶಲತೆ ಇಲ್ಲದಿರುವರಿ ದೊಡ್ಡ ಅಸ್ತ್ರವನ್ನು ಕೊಡುತ್ತಿವೆ. ಇದು ಸಮಾಜವನ್ನು ದಾರಿ ತಪ್ಪಿಸುತ್ತಿದೆ ಎಂದು ಆಪಾದಿಸಿದರು. ಕರ್ಲ್ಬುಗಿ ಬಸವಣ್ಣ ಸ್ಥಾಪಿಸಿದ ಲಿಂಗಾಯತವನ್ನು ಕರ್ನಾಟಕದ ಮೊದಲನೇ ಧರ್ಮ ಎಂದು ವಾದಿಸಿದವರು. ಮಠದ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಹಿತ್ಯ ಮತ್ತು ಸಂಶೋಧನೆಗೆ ಬಳಸಿಕೊಂಡರು. ವೀರಶೈವರು ಜಗ್ದಗುರುಗಳಲ್ಲ ಜಗ್ದಾಚಾರ್ಯರರು ಎಂದು ಪ್ರತಿಪಾದಿಸಿದವರು ಎಂದು ತಿಳಿಸಿದರು.
ಕರ್ಲ್ಬುಗಿ ಒಬ್ಬ ಭಿನ್ನ ಆಲೋಚನೆಗಳ ಬರಹಗಾರ. ಸಂಶೋಧನೆ ಅವರ ಇಷ್ಟದ ಕ್ಷೇತ್ರವಾಗಿತ್ತು. ಅವರ ಗುರು ಆರ್. ಸಿ. ಹಿರೇಮಠgನ್ನು ಮೀರಿ ಬೇಳೆದವರು. ಗುರು-ಶಿಷ್ಯರ ಸಂಬಂಧ ಹಾಳಾಗಿದ್ದು ವಿಷಾದಕರ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಡಾ| ನರಸಿಂಹ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.