ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸಮಾಜ ಸೇವಕ ಬೈಲುಮನೆ ಆನಂದ ಬಿಲ್ಲವ ಇವರ ವತಿಯಿಂದ ಗಂಗೊಳ್ಳಿಯ ಶ್ರೀ ಶಿರಸಿ ಅಮ್ಮನವರ ಸನ್ನಿಧಾನದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆನಂದ ಬಿಲ್ಲವ ಅವರು ದೇವರಲ್ಲಿನ ನಂಬಿಕೆ ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ನಿಮ್ಮ ಕಲಿಕೆ ಉಳಿದವರಿಗೆ ಪ್ರೇರಣೆಯಾಗುವಂತಿರಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅಧ್ಯಕ್ಷ ಜಿ. ಗೋಪಾಲ ಪೂಜಾರಿ, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ, ಮಾಜಿ ಪಂಚಾಯತ್ ಸದಸ್ಯ ನಾಗರಾಜ ಖಾರ್ವಿ, ಶ್ರೀ ಮಹಂಕಾಳಿ ಕುಣಿತ ಭಜನಾ ಮಂಡಳಿ ತಂಡದ ಮುಖ್ಯಸ್ಥೆ ಜ್ಯೋತಿ ಖಾರ್ವಿ ಉಪಸ್ಥಿತರಿದ್ದರು.