ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಹೆಂಡತಿ ಮೃತಪಟ್ಟ ನಾಲ್ಕು ಗಂಟೆಗಳ ಬಳಿಕ ಪತಿಯೂ ಸಾವನ್ನಪ್ಪಿದ್ದಾರೆ. ಈ ಘಟನೆ ಕುಂದಾಪುರದ ಸಾಸ್ತಾನ ಬಳಿಯ ಗುಂಡ್ಮಿಯಲ್ಲಿ ನಡೆದಿದೆ.
ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಜೆ ರತ್ನಾಕರಾಯ ಮತ್ತು ಪತ್ನಿ ಸರೋಜಮ್ಮ ಸಾವಿನಲ್ಲೂ ಒಂದಾದ ಜೋಡಿ. ಸರೋಜಮ್ಮ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಈ ವೇಳೆ ಜೊತೆಯಲ್ಲೇ ಇದ್ದ ರತ್ನಾಕರಾಯ ಅವರ ಆರೋಗ್ಯದಲ್ಲೂ ಏರುಪೇರಾಗಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.










