ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೆಶ್ವರ ದೇಗುಲದ ಪ್ರಧಾನ ಅರ್ಚಕರಾದ ಚಂದ್ರಶೇಖರ ಮಂಜ (78) ಅವರು ಇತ್ತೀಚಿಗೆ ನಿಧನ ಹೊಂದಿದರು.
ಹಿರಿಯ ಅರ್ಚಕರಾಗಿ ಹಲವು ವರ್ಷ ಕಾಲ ಸೇವೆ ಸಲ್ಲಿಸಿದ್ದ ಅವರು ಕ್ಷೇತ್ರದ ಭಕ್ತರ ಗೌರವಕ್ಕೆ ಪಾತ್ರರಾಗಿದ್ದರು. ದೇಗುಲದ ಆನುವಂಶೀಯ ಮೊಕೇಸರ ಸಿ. ಸದಾಶಿವ ಶೆಟ್ಟಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.