ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಭಕ್ತರೋರ್ವರು ಕಾಣಿಕೆ ರೂಪದಲ್ಲಿ ನೀಡಿದ 1 ಕೆ.ಜಿ. (90 ಲಕ್ಷ ರೂ. ಮೌಲ್ಯ) ತೂಕದ ನವರತ್ನ ಕಲ್ಲುಗಳುಳ್ಳ ಚಿನ್ನದ ಮುಖವಾಡವನ್ನು ಬುಧವಾರ ಶ್ರೀದೇವಿಗೆ ಸಮರ್ಪಿಸಲಾಯಿತು.
ತುಮಕೂರು ಜಿಲ್ಲೆಯಶಿರಾದ ಡಾ| ಕೆ. ಲಕ್ಷ್ಮೀನಾರಾಯಣ ಕುಟುಂಬ ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಬೆಳಗ್ಗೆ ರಥಬೀದಿಯಿಂದ ವಾದ್ಯಘೋಷ ಗಳೊಡನೆ ಚಿನ್ನದ ಮುಖವಾಡವನ್ನು ದೇಗುಲಕ್ಕೆ ತರಲಾಯಿತು.

ಅರ್ಚಕ ಕೆ.ಎನ್. ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್, ಕಾಳಿದಾಸ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀದೇವಿಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ ಸುಧಾ ಮತ್ತಿತರರು ಇದ್ದರು. ಜೂ. 10ರಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಮುಖವಾಡಕ್ಕೆ ಶೃಂಗೇರಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಗಿತ್ತು. ಆಯುರ್ವೇದ ವೈದ್ಯ ಡಾ। ಕೆ.ಲಕ್ಷ್ಮೀನಾರಾಯಣ ಅವರು 45 ವರ್ಷಗಳ ಹಿಂದೆ ಶ್ರೀದೇವಿಗೆ ಚಿನ್ನದ ಮುಖವಾಡವನ್ನು ಸಮರ್ಪಿಸುವ ಕನಸು ಕಂಡಿದ್ದರು.










