ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಗ್ರಾಮದ ರಥಬೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಶಾಸಕ ಗುರುರಾಜ ಗಂಟಿಹೊಳೆ ಅವರು ಇತ್ತಿಚಿಗೆ ಉದ್ಘಾಟಿಸಿದರು.
ಈ ಹಿಂದೆ ಅಂಗನವಾಡಿ ಕೇಂದ್ರ ಸ್ಥಾಪನೆ ಮಾಡಲು ಕಾರಣಿಕರ್ತರಾದ ದಿ. ಚಂದು ಗಾಣಿಗ ಅವರ ಪರವಾಗಿ ಮಗನಾದ ರಾಧಾಕೃಷ್ಣ ಗಾಣಿಗ ಅವರನ್ನು ಹಾಗೂ ಅಂಗನವಾಡಿಯ ಕುಂದು ಕೊರತೆಗಳಿಗೆ ಎಲ್ಲಾ ಕೆಲಸ ಕಾರ್ಯಗಳಿಗೆ ನಿರಂತರ ಶ್ರಮಿಸಿದ ಶ್ರೀ ದುರ್ಗಾ ಫ್ರೆಂಡ್ಸ್ ಸಂಸ್ಥೆಯ ಪರವಾಗಿ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ದೇವಾಡಿಗ ಹಾಗೂ ಅಂಗನವಾಡಿಯ ಕಾರ್ಯಕರ್ತೆ ಸುಗುಣ ಮತ್ತು ಸಹಾಯಕಿ ಭಾರತಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಥಬೀದಿ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ದುರ್ಗಾ ಫ್ರೆಂಡ್ಸ್ ಸಂಸ್ಥೆ ಅವರು ನೀಡಿದ ಪುಸ್ತಕ ವನ್ನು ಮಾನ್ಯ ಶಾಸಕರು ಮಕ್ಕಳಿಗೆ ವಿತರಿಸಿದರು ಹಾಗೆ ಅಂಗನವಾಡಿಯ ಕಾರ್ಯಕ್ರಮ ಗಳಿಗೆ ಸಹಕಾರ ನೀಡಿದ ಮಹನೀಯರನ್ನು ಗುರುತಿಸಿ ಸ್ಮರಣಿಕೆ ನೀಡಲಾಯಿತು. ಪುಟಾಣಿಗಳಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಉಪ್ಪುಂದ ಗ್ರಾಮ ಪಂಚಾಯತ್ ಪಂಚಾಯತ್ ಅಧ್ಯಕ್ಷರಾದ ಮೋಹನಚಂದ್ರ, ಬೈಂದೂರು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮೋಹನ್ ಪೂಜಾರಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಯು. ಸತೀಶ್ ಶೆಟ್ಟಿ, ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ದೇವಾಡಿಗ, ನಾಗರಾಜ್ ಶೇಟ್, ಪ್ರೇಮಾ ದೇವಾಡಿಗ, ದಿವಾಕರ್ ಶೆಟ್ಟಿ, ಯುತ ಜಗನ್ನಾಥ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೌರಿ ದೇವಾಡಿಗ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುದರ್ಶನ್, ಇಲಾಖೆಯ ಬೈಂದೂರು ವಲಯ ಮೇಲ್ವಿಚಾರಕರಾದ ರೇವತಿ, ಅಂಗನವಾಡಿ ಸಮಿತಿ ಅಧ್ಯಕ್ಷರಾದ ಪ್ರತಿಮಾ ದೇವಾಡಿಗ, ಶಾಲಾ ಮುಖ್ಯ ಶಿಕ್ಷಕರಾದ ಮಂಜುನಾಥ, ಆರೋಗ್ಯ ಕಾರ್ಯಕರ್ತೆ ಸುವರ್ಣ, ಶ್ರೀ ದುರ್ಗಾ ಫ್ರೆಂಡ್ಸ್ ನ ಅಧ್ಯಕ್ಷರು / ಸರ್ವ ಸದಸ್ಯರು ಅಂಗನವಾಡಿ ಸಮಿತಿ ಸದಸ್ಯರು, ಪೋಷಕರು ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಮುದ್ದು ಮಕ್ಕಳು ಉಪಸ್ಥಿತರಿದ್ದರು.
ದೀಪಿಕಾ ದೇವಾಡಿಗ ಸನ್ಮಾನಿತರ ಪಟ್ಟಿ ವಾಚಿಸಿದರು, ಅಂಗನವಾಡಿ ಕಾರ್ಯಕರ್ತೆ ಉಷಾ ಅವರು ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತರಾದ ಸುಗುಣ ಇವರು ಅತಿಥಿಗಳನ್ನು ಸ್ವಾಗತಿಸಿದರು.
ಸುಧೀರ್ ದೇವಾಡಿಗ, ಪ್ರಭಾಕರ ದೇವಾಡಿಗ, ಗಣೇಶ್ ದೇವಾಡಿಗ,ರಾಘವೇಂದ್ರ ದೇವಾಡಿಗ, ರೋಹಿತ್, ನಂದೀಶ್ ,ಮಣಿಕಂಠ, ರಮೇಶ್ ಪಿ,ಭರತ, ಪ್ರಶಾಂತ್, ಅರುಣ್, ಯೋಗೀಶ್, ಆಧರ್ಶ, ಸೂರಜ್, ನಾಗೇಂದ್ರ, ವಸಂತ, ನಾಗರಾಜ್, ಸುಧಾಕರ್, ಶಿವರಾಜ್, ಹರೀಶ್,ಕೇಶವ ದೇವಾಡಿಗ ಸಹಕಾರ ನೀಡಿದರು. ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ಹಿಂದಿನ ದಿನ ನೂತನ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.















