ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಸಾಲಿಗ್ರಾಮದ ತರಕಾರಿ ವ್ಯಾಪಾರಿ ವಿಠ್ಠಲ ಪೈ (57) ಅವರು ಸೋಮವಾರದಂದು ವಿಧಿವಶರಾದರು.
ಸಾಲಿಗ್ರಾಮ ಪರಿಸರದಲ್ಲಿ ಭಜನಾ ಪ್ರವೀಣರಾಗಿ ಹೆಸರಾಂತರಾಗಿದ್ದ ಅವರು ರಾಮನ ಅನನ್ಯ ಭಕ್ತರಾಗಿದ್ದರು. ಆಗಿಂದಾಗ್ಗೆ ನಮ್ಮ ಶ್ರೀ ಗುರು ನರಸಿಂಹ ದೇವಳಕ್ಕೆ ತರಕಾರಿಯನ್ನು ಸೇವಾ ರೂಪದಲ್ಲಿ ತಂದು ಒಪ್ಪಿಸುತ್ತಿದ್ದರು.
ಪೈ ಅವರಿಗೆ ಅದೆಷ್ಟು ಬಾರಿ ಶ್ರೀ ದೇವರ ಪ್ರಸಾದವನ್ನು ನೀಡಿ ಶುಭವನ್ನು ಹಾರೈಸಿದ್ದೇವೋ ಅದರ ಲೆಕ್ಕವೇ ಸಿಗುತ್ತಿಲ್ಲ. ತೆಕ್ಕಟ್ಟೆ ಕೊಮೆಯಲ್ಲಿ ಪೈ ಮತ್ತು ಸಮಾನ ಮನಸ್ಕ ರಾಮಭಕ್ತರ ತನು ಮನ ಧನ ಸೇವೆಯಿಂದ ಅಲ್ಲಿನ ಶ್ರೀ ರಾಮ ಮಂದಿರವು ನಿತ್ಯ ಪೂಜಾಯುಕ್ತ ಶ್ರದ್ಧಾಕೇಂದ್ರವಾಗಿ ರೂಪುಗೊಂಡಿದೆ.
ಮೃತರು ಪತ್ನಿ ಹಾಗೂ ಮೂವರು ಪುತ್ರಿಯವರನ್ನು ಅಗಲಿದ್ದಾರೆ










