ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ಐಎಂಜೆ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಮತ್ತು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಅಪ್ ಪ್ಯಾರಾಮೆಡಿಕಲ್ ಸೈನ್ಸಸ್ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆಯುಷ್ಮಾನ್ ಅರೋಗ್ಯ ಕೇಂದ್ರದ ಯೋಗ ಗುರುಗಳಾದ ಶೋಭಾ ಶೆಟ್ಟಿ ಹಾಗೂ ಚೆನ್ನಮ್ಮ ಉಡುಪ, ಐಎಂಜೆ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗ್ಡೆ, ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜೆನ್ನಿಫರ್ ಫ್ರೀಡಾ ಮೆನೆಜಸ್, ಐಎಂಜೆ ಅಲೈಡ್ ಹೆಲ್ತ್ ಸೈನ್ಸಸ್ ಇನ್ಸ್ಟಿಟ್ಯೂಟ್‌ನ ಡೀನ್ ಡಾ. ಪದ್ಮಚರಣ ಸ್ವೈನ್, ಐಎಂಜೆ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಹಾಗೂ ಮೂಡ್ಲಕಟ್ಟೆ ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್‌ನ ಉಪಪ್ರಾಂಶುಪಾಲರಾದ ಸೌಜನ್ಯಾ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ. ಪದ್ಮಚರಣ ಸ್ವೈನ್ ಅವರು ಯೋಗದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿ ಶೋಭಾ ಶೆಟ್ಟಿ ಅವರು ಪ್ರತಿದಿನ ಯೋಗಾಭ್ಯಾಸ ಮಾಡುವ ಮಹತ್ವವನ್ನು ಒತ್ತಿ ಹೇಳಿದರು.
ಡಾ. ರಾಮಕೃಷ್ಣ ಹೆಗ್ಡೆ ಅವರು ವಿದ್ಯಾರ್ಥಿಗಳಿಗೆ ಯೋಗದಿಂದಾಗುವ ಉಪಯೋಗಗಳನ್ನು ತಿಳಿಸಿದರು. ನಂತರ ಯೋಗ ಗುರುಗಳು ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನ ಮಾಡಿಸಿದರು ಮತ್ತು ಮುಂದುವರಿಸುವಂತೆ ಸಲಹೆ ನೀಡಿದರು.
ಈ ಅರ್ಥಪೂಣವಾದ ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಪ್ರೊಫೆಸರ್ ಜೆನ್ನಿಫರ್ ಫ್ರೀಡಾ ಮೆನೆಜಸ್ ಅವರು ಸ್ವಾಗತ ಕೋರಿದರು ಹಾಗೂ ಸೌಜನ್ಯಾ ಧನ್ಯವಾದ ಅರ್ಪಿಸಿದರು. ಆಡಳಿತ ಅಧಿಕಾರಿ ಪಾರ್ಥ ಸಾರಥಿ ಹಾಗೂ ಪ್ರೊಫೆಸರ್ ಚಂದ್ರಶೇಖರ್ ಅವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.










