ಕುಂದಾಪ್ರ ಡಾಟ್ ಕಾಂ ಸುದ್ದಿ..
ಬೈಂದೂರು: ಯೋಗ ಮನಸ್ಸು ಮತ್ತು ದೇಹವನ್ನು ಆರೋಗ್ಯವನ್ನಾಗಿಸುತ್ತದೆ. ಕೇವಲ ಯೋಗ ದಿನಾಚರಣೆಯಂದು ಯೋಗಾಸನಗಳನ್ನು ಮಾಡದೆ ನಮ್ಮ ನಿತ್ಯದ ಜೀವನದಲ್ಲಿಯೂ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಆರೋಗ್ಯ ರಕ್ಷಣಾ ಸಮಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಹೇಳಿದರು.
ಅವರು ಜಿಲ್ಲಾಡಳಿತ, ಜಿ.ಪಂ ಉಡುಪಿ ,ಆಯುಷ್ ಇಲಾಖೆ ಉಡುಪಿ,ಗ್ರಾಮ ಪಂಚಾಯತ್ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೊಡು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ 11ನೇ ಅಂತಾರಾಷ್ಟ್ರಿಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿದಿನ ಬೆಳಿಗ್ಗೆ ಆರರಿಂದ ಏಳು ಗಂಟೆಯವರೆಗೆ ಸದ್ರಿ ಚಿಕಿತ್ಸಾಲಯದಲ್ಲಿ ನಡೆಯುವ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
ಚಿಕ್ಕಯ್ಯಶೆಟ್ಟಿ ಅವರು ಮಾತನಾಡಿ, ಔಷಧವನ್ನು ಸೇವಿಸಿ ನಮ್ಮ ಕಾಯಿಲೆಯನ್ನು ಗುಣಪಡಿಸಿಕೊಳ್ಳುವುದಕ್ಕಿಂತ ನಿತ್ಯವೂ ಯೋಗಾಸನವನ್ನು ಮಾಡಿ ರೋಗ ಬಾರದಂತೆ ನೋಡಿಕೊಳ್ಳುವುದು ಉತ್ತಮ. ಹಾಗಾಗಿ ಪ್ರತಿಯೊಬ್ಬರೂ ನಿತ್ಯವೂ ಯೋಗ ಮಾಡಿ ನಿರೋಗಿಯಾಗಿ ಎಂದು ನುಡಿದರು.
ಯೋಗದಲ್ಲಿ ಪರಿಣಿತ ಪಡೆದಿರುವ ಮಾತ್ರವಲ್ಲದೆ ಹಲವಾರು ಮಕ್ಕಳನ್ನು ರಾಜ್ಯ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವುದರಲ್ಲಿ ಸದಾ ಶ್ರಮಿಸುತ್ತಿರುವ ಸುಬ್ಬಯ್ಯ ದೇವಾಡಿಗ ನಿವೃತ್ತ ಶಿಕ್ಷಕರು ಅವರನ್ನ ಯೋಗ ದಿವಸದಂದು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಕಾಲ್ತೋಡು ಉಪಾಧ್ಯಕ್ಷರಾದ ಗೌರಿ ಹಾಗೂ ಗ್ರಾ.ಪಂ. ಕಾಲ್ತೋಡು ಇದರ ಸದಸ್ಯರಾದ ಕಿರಣ್ ಶೆಟ್ಟಿ, ಶ್ರೀಮತಿ, ನೇತ್ರಾವತಿ ಆಚಾರ್ಯ ಉಪಸ್ಥಿತರಿದ್ದರು.
ಡಾಕ್ಟರ್ ವೀಣಾ ಕಾರಂತ್ ವೈದ್ಯಾಧಿಕಾರಿಗಳು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ಪೋಡು ಅವರು ಸ್ವಾಗತಿಸಿ ಪ್ರಸ್ತಾವಿಕ ಮಾತನಾಡುತ್ತಾ ಯೋಗ ದಿನಾಚರಣೆಯ ಮಹತ್ವ ಹಾಗೂ ಯೋಗದ ಮಹತ್ವವನ್ನು ತಿಳಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕೊನೆಯಲ್ಲಿ ಅಂತರಾಷ್ಟ್ರೀಯ ಯೋಗಾ ದಿನಾಚರಣೆಯ ಸಾಮಾನ್ಯ ಯೋಗ ಪ್ರೋಟೋಕಾಲ್ ಪ್ರಕಾರ ಸುಬ್ಬಯ್ಯ ಮಾಸ್ಟರ್ ಹಾಗು ಯೋಗ ತರಬೇತುದಾರರಾದ ಸರಸ್ವತಿ ಕುಲಾಲ್ ಹಾಗೂ ಶೇಖರ್ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಸಾರ್ವಜನಿಕರಿಗೆ ಯೋಗಾಸನ ಮಾಡಿಸಲಾಯಿತು.
ಆಸ್ಪತ್ರೆಯ ಸಿಬ್ಬಂದಿಗಳಾದ ನಾಗದೀಪ ಆಚಾರ್ಯ ಹಾಗೂ ವಿಶಾಲ ಕಾರ್ಯಕ್ರಮಕ್ಕೆ ಸಹಕರಿಸಿದರು. ಒಟ್ಟು 70 ಕ್ಕು ಅಧಿಕ ಮಂದಿ ಭಾಗವಹಿಸಿ ದ್ದರು. ಕೊನೆಯಲ್ಲಿ ಬಾಗವಹಿಸಿದ ಎಲ್ಲರಿಗೂ ಲಘು ಉಪಹಾರ ನೀಡಲಾಯಿತು.















