ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿವೃತ್ತ ಮುಖ್ಯ ಶಿಕ್ಷಕ, ರಾಜ್ಯ ಮಟ್ಟದ ಯೋಗ ಸಂಪನ್ಮೂಲ ವ್ಯಕ್ತಿ ನಾರಾಯಣ ದೇವಾಡಿಗ ಅವರ ನೇತೃತ್ವದಲ್ಲಿ ಹಿರಿಯ ನಾಗರಿಕರ ವೇದಿಕೆಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.
ವೇದಿಕೆಯ ಅಧ್ಯಕ್ಷ ಗಿರೀಶ್ ಶ್ಯಾನುಭಾಗರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ, ಯೋಗಗುರುಗಳಾದ ನಾರಾಯಣ ದೇವಾಡಿಗ ಅವರಿಗೆ ಸನ್ಮಾನಿಸಲಾಯಿತು.
ಸದಸ್ಯ ವೆಂಕಟರಮಣರು ಲಯಬದ್ಧವಾಗಿ ಯೋಗ ಗೀತೆ ಹಾಡಿದರು. ನಿಕಟ ಪೂರ್ವ ಅಧ್ಯಕ್ಷ ಪುಂಡಲೀಕ ನಾಯಕರು ಯೋಗದ ಮಹತ್ವವನ್ನು ವಿವರಿಸಿ ಸ್ವರಚಿತ ಯೋಗ ಕವನ ವಾಚಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಉಮೇಶ ರಾಯ್ಕರ್ ಅವರಿಂದ ಪ್ರಾರ್ಥನೆ, ಕಾರ್ಯದರ್ಶಿ ಗೋವಿಂದ ಬಿಲ್ಲವರಿಂದ ಗತಸಭೆಯ ವರದಿವಾಚನ, ಕಾರ್ಯಕ್ರಮ ನಿರೂಪಣೆ ನಡೆಯಿತು.
ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಸೀನಿಯರ್ ಛೇಂಬರ್ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಯಿತು.
ವೇದಿಕೆ ಉಪಾಧ್ಯಕ್ಷ ಜಿ. ಈಶ್ವರ, ಸೀನಿಯರ್ ಛೇಂಬರ್’ನ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಜಯಾನಂದ ಪಟಗಾರರು ಉಪಸ್ಥಿತರಿದ್ದು ಶುಭಕೋರಿದರು.
ಉಭಯ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಚಂದಗಾಣಿಸಿದರು. ವೇದಿಕೆಯ ನೋಂದಣಿಯನ್ನು ಸ್ವಂತ ವೆಚ್ಚದಲ್ಲಿ ನಿರ್ವಹಿಸಿದ ವೆಂಕಟೇಶ ಕಾರಂತರನ್ನು ಅಭಿನಂದಿಸಲಾಯಿತು.
ಕೊನೆಯಲ್ಲಿ ಕಾರ್ಯದರ್ಶಿ ಗೋವಿಂದ ಬಿಲ್ಲವರು ವಂದನಾರ್ಪಣೆ ಮಾಡಿದರು.















