ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮೃದ್ಧ ಬೈಂದೂರು 300 ಟ್ರೀಸ್ ಉಪಕ್ರಮದ ಅಡಿಯಲ್ಲಿ ಕೆನರಾ ಬ್ಯಾಂಕ್ ಸಿದ್ದಾಪುರ, ಕಾಲಭೈರವೇಶ್ವರ ಎಂಟರ್ಪ್ರೈಸಸ್ ಬೆಂಗಳೂರು, ರೋಟರಿ ಕ್ಲಬ್ ಸಿದ್ದಾಪುರ ಹೊಸಂಗಡಿ, ಸ್ವಯಂ ಸ್ಫೂರ್ತಿ ಫೌಂಡೇಶನ್ ಬೆಂಗಳೂರು ಇದರ ಸಹಕಾರದೊಂದಿಗೆ ಮಂಗಳವಾರದಂದು ಹಳ್ಳಿಹೊಳೆ ಗ್ರಾ. ಪಂ. ವ್ಯಾಪ್ತಿಯ ಎಲ್ಲಾ ಶಾಲಾ ಮಕ್ಕಳಿಗೆ ಕೊಡೆ ವಿತರಣೆ ಹಾಗೂ ಕೆರಾಡಿ, ಆಜ್ರಿ, ಭಾಗದ ಆಯ್ದ ಶಾಲೆಗಳಿಗೆ ನೋಟ್ ಬುಕ್ ಮತ್ತು ಕಲಿಕಾ ಸಾಮಗ್ರಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟೆಹೊಳೆ ಅವರು ಉದ್ಘಾಟನೆ ಮಾಡಿದರು.
ಕೆನರಾ ಬ್ಯಾಂಕ್ ನಿಂದ 2 ಲಕ್ಷ ಮೌಲ್ಯದ ಪಿಟೋಪಕರಣ, ಸಂಘ ಸಂಸ್ಥೆ ಗಳಿಂದ 15 ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ಕಲಿಕಾ ಸಾಮಗ್ರಿ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು.


ಹಳ್ಳಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ನಾಗೇಶ್ ನಾಯ್ಕ, ಆಜ್ರಿ ಮಾನಂಜೆಯ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಡಿ., ರೋಟರಿ ಹೊಸಂಗಡಿ ಸಿದ್ದಾಪುರ ಅಧ್ಯಕ್ಷರಾದ ಸುಹಾಸ್ ಚಾತ್ರ, ಸಿದ್ದಾಪುರ ಕೆನರಾ ಬ್ಯಾಂಕ್‌ನ ಮುಖ್ಯಶಾಖಾಧಿಕಾರಿ ಸಂತೋಷ್ ಕುಮಾರ್ ಹಾಗೂ ಎಲ್ಲಾ ಸದಸ್ಯರು, ಪಿಡಿಒ ರುಕ್ಕನ ಗೌಡ, ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರು ಪ್ರದೀಪ್ ಕೊಠಾರಿ ಪ್ರಸ್ತಾವನೆ ಗೈದರು. ಸ್ವಯಂ ಸ್ಫೂರ್ತಿ ಪೌಂಡೇಶನ್ ನ ನಾಗರಾಜ್ ಶೆಟ್ಟಿ ಹಾಗೂ ಕಾಲ ಭೈರವೇಶ್ವರ ಎಂಟರ್ಪ್ರೈಸಸ್ ನ ಶ್ರೀ ರಾಘವೇಂದ್ರ ಜಿ. ವಿ ತಾಳಗುಪ್ಪ ಇವರ ಕೊಡುಗೆಯನ್ನು ಅಭಿನಂದಿಸಲಾಯಿತು.
ಸಮಾರಂಭದ ಒಂದೇ ವೇದಿಕೆಯಲ್ಲಿ ಹಲವು ಶಾಲೆಗಳಿಗೆ ಹಲವಾರು ಕೊಡುಗೆಗಳನ್ನು ವಿತರಿಸಲಾಯಿತು.















