ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸರಕಾರಿ ಶಾಲೆಗಳಿಗೆ ಒತ್ತು ನೀಡಿ, ಸಹಕಾರ ನೀಡಿದರೆ ಸರಕಾರಿ ಶಾಲೆಗಳು ಬೆಳೆಯುತ್ತದೆ. ಊರಿನ ಶಾಲೆಗಳು ಬೆಳೆದಾಗ ಗ್ರಾಮಗಳು ಅಭಿವೃದ್ಧಿಯಾಗುತ್ತದೆ. ನಮ್ಮೂರಿನ ಶಾಲೆ ಎನ್ನುವ ಹೆಮ್ಮೆಯಿಂದ ತಾವು ದುಡಿದ ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು ಈ ಸರಕಾರಿ ಶಾಲೆಗೆ ನಿರ್ಮಿಸಿಕೊಟ್ಟ ಬೃಹತ್ ರಂಗಮಂದಿರ ಕೊಡುಗೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅವರು ಕೋಟೇಶ್ವರ ಸೇವಾ ಟ್ರಸ್ಟ್‌ನ ನೂತನ ಕಚೇರಿ ಮತ್ತು ಸ್ವಚ್ಛ ಭಾರತ ಅಭಿಯಾನ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಗೋಪಾಡಿ ಶ್ರೀನಿವಾಸ ರುಕ್ಕಿಣಿ ಫೌಂಡೇಶನ್ ಮತ್ತು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಶತಮಾನೋತ್ಸವ ಸಮಿತಿ ನಿರ್ಮಿಸಿದ ಗೋಪಾಡಿ ರುಕ್ಕಿಣಿ ಶ್ರೀನಿವಾಸ ರಂಗಮಂಟಪವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಶ್ರೀ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, “ಒಂದು ಗ್ರಾಮದಲ್ಲಿ ದೇವಾಲಯ ಮತ್ತು ವಿದ್ಯಾಲಯ ಚೆನ್ನಾಗಿ ಕಾರ್ಯನಿರ್ವಹಿಸಿ ಮುನ್ನಡೆದಾಗ ಗ್ರಾಮದ ಜತೆಯಲ್ಲಿ ಗ್ರಾಮಸ್ಥರು ಕೂಡ ಜ್ಞಾನಿಗಳಾಗಿದ್ದಾರೆ ಎಂದರ್ಥ. ಇದಕ್ಕೆ ಪೂರಕವಾಗಿ ಕೋಟೇಶ್ವರ ಸೇವಾ ಟ್ರಸ್ಟ್ ಮೂಲಕ ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಕೆಪಿಎಸ್ ಶಾಲೆಯಲ್ಲಿ ರಂಗಮಂಟಪ ನಿರ್ಮಿಸಿ ಶ್ರೇಷ್ಠ ಕಾರವನ್ನು ಶ್ರೀನಿವಾಸ ರಾವ್ ನೇತೃತ್ವದ ತಂಡ ಮಾತೃಭೂಮಿಗೆ ಅರ್ಪಿಸಿದೆ,” ಎಂದರು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಲಿ ಅಧ್ಯಕ್ಷತೆ ವಹಿಸಿದ್ದರು.
ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ಗೋಪಾಡಿ ಶ್ರೀನಿವಾಸ ರುಕ್ಕಿಣಿ ಫೌಂಡೇಶನ್ ಸಂಸ್ಥಾಪಕ ಗೋಪಾಡಿ ಶ್ರೀನಿವಾಸ ರಾವ್, ಅಧ್ಯಕ್ಷೆ ರುಕ್ಕಿಣಿ ಜಿ., ಗೋಪಾಡಿ ಶ್ರೀನಿವಾಸ ರುಕ್ಕಿಣಿ ಫೌಂಡೇಶನ್ ಕೋಶಾಧಿಕಾರಿ ಎಚ್.ರಾಮಚಂದ್ರ ವರ್ಣ, ಕೋಟೇಶರ ಕರ್ನಾಟಕ ಪಬ್ಲಿಕ್ ಸ್ಕೂಲ್ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ವಿಠಲ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಜಿಲ್ಲಾ ಡಯಟ್ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಅಶೋಕ್ ಕಾಮತ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ ಉಡುಪ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ದಿನೇಶ್ ಹೆಗ್ಡೆ ಮೊಳಹಳ್ಳಿ ಉಪಸ್ಥಿತರಿದ್ದರು.
ಗೋಪಾಡಿ ಶ್ರೀನಿವಾಸ ರುಕ್ಕಿಣಿ ಫೌಂಡೇಶನ್ ಸಂಸ್ಥಾಪಕ ಗೋಪಾಡಿ ಶ್ರೀನಿವಾಸ ರಾವ್, ಅಧ್ಯಕ್ಷೆ ರುಕ್ಕಿಣಿ ಜಿ., ಸಚಿವ ರಾಮಲಿಂಗಾ ರೆಡ್ಡಿ ಹಾಗೂ ರಂಗಮಂದಿರ ನಿರ್ಮಿಸಿದ ಗುತ್ತಿಗೆದಾರ ಜಗದೀಶ ಮೊಗವೀರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕೋಟೇಶ್ವರ ಸೇವಾ ಟ್ರಸ್ಟ್ ಕಾವ್ಯದರ್ಶಿ ರಥಶಿಲ್ಪಿ ರಾಜ ಗೋಪಾಲ ಆಚಾರ್ ಕೋಟೇಶ್ವರ ಪ್ರಾಸ್ತಾವಿಕ ಮಾತ ನಾಡಿದರು. ಗೋಪಾಡಿ ಶ್ರೀನಿವಾಸ ರುಕ್ಕಿಣಿ ಫೌಂಡೇಶನ್ ಕಾರ್ಯದರ್ಶಿ ಅಮೃತ ಕುಮಾರ್ ತೌಳ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಗೋಪಾಡಿ ಶ್ರೀನಿವಾಸ ರುಕ್ಕಿಣಿ ಫೌಂಡೇ ಶನ್ ಜತೆ ಕಾಠ್ಯದರ್ಶಿ ಸುಹಾಸ್ ಉಪಾಧ್ಯ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗ ಮಂಟಪದಲ್ಲಿ ಭಜನಾ ಕಾರ್ಯಕ್ರಮ ಮತ್ತು ನೃತ್ಯ ಸಿಂಚನ ಕುಂದಾಪುರ ಅವರಿಂದ ಭರತನಾಟ್ಯ ಪ್ರದರ್ಶನ ಗೊಂಡಿತು.















