ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ಸೋಮೇಶ್ವರ ಸಮುದ್ರ ತೀರದಲ್ಲಿ ದೇಗುಲದ ಗೋಪುರಕ್ಕೆ ಅಳವಡಿಸುವ ಸುಮಾರು 3 ಕೆ.ಜಿ. ತಾಮ್ರದ ಕಲಶ ಪತ್ತೆಯಾಗಿದೆ.

ಗಂಗೊಳ್ಳಿ ಕರಾವಳಿ ಕಾವಲು ಠಾಣೆಯ ಇನ್ಸ್ಪೆಕ್ಟರ್ ವಸಂತ ರಾಮ ಆಚಾರ್, ಉಪನಿರೀಕ್ಷಕ ಸುಬ್ರಹ್ಮಣ್ಯ ಎಚ್, ಗೃಹರಕ್ಷಕ ದಳದ ನಾಗೇಂದ್ರ ಸ್ಥಳಕ್ಕೆ ಭೇಟಿ ನೀಡಿ ಕಲಶವನ್ನು ಪರಿಶೀಲಿಸಿದ್ದಾರೆ.
ಇದರ ವಾರಸುದಾರರು ಯಾರಾದರೂ ಇದ್ದರೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.










