ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ರ ಸ್ಪರ್ಧೆಗಳ ಅಂಗವಾಗಿ ಸೋಮವಾರ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಖೋ ಖೋ ಸ್ಪರ್ಧೆಗಳನ್ನು ನಡೆಸಲಾಯಿತು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸ್ಪರ್ಧೆ ಇರಬೇಕು. ಸೋಲು ಕೂಡ ಗೆಲುವಿನ ಮೂಲವಾದ್ದರಿಂದ ಸೋತಿದ್ದೇವೆಂದು ನೊಂದುಕೊಳ್ಳಬಾರದು. ಪ್ರಾಮಾಣಿಕವಾಗಿ ಆಟಗಳನ್ನು ಆಡಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
14 ವರ್ಷದೊಳಗಿನ ವಯೋಮಿತಿಯ ಹುಡುಗರ ವಲಯ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪಾರಂಪಳ್ಳಿ, ಉಡುಪಿ ಪ್ರಥಮ ಸ್ಥಾನವನ್ನು, ಸೈಂಟ್ ಫಿಲಿಪ್ಸ್ ಸೆಂಟ್ರಲ್ ಸ್ಕೂಲ್, ಬಸ್ರೂರು ದ್ವಿತೀಯ ಸ್ಥಾನವನ್ನು, ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
14 ವರ್ಷದೊಳಗಿನ ವಯೋಮಿತಿಯ ಹುಡುಗಿಯರ ವಲಯ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪಾರಂಪಳ್ಳಿ, ಉಡುಪಿ ಪ್ರಥಮ ಸ್ಥಾನವನ್ನು, ಸೈಂಟ್ ಫಿಲಿಪ್ಸ್ ಸೆಂಟ್ರಲ್ ಸ್ಕೂಲ್, ಬಸ್ರೂರು ದ್ವಿತೀಯ ಸ್ಥಾನವನ್ನು, ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
17 ವರ್ಷದೊಳಗಿನ ವಯೋಮಿತಿಯ ಹುಡುಗರ ವಲಯ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಥಮ ಸ್ಥಾನವನ್ನು, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ದ್ವಿತೀಯ ಸ್ಥಾನವನ್ನು, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪಾರಂಪಳ್ಳಿ, ಉಡುಪಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
17 ವರ್ಷದೊಳಗಿನ ವಯೋಮಿತಿಯ ಹುಡುಗಿಯರ ವಲಯ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಥಮ ಸ್ಥಾನವನ್ನು, ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪಾರಂಪಳ್ಳಿ, ಉಡುಪಿ ದ್ವಿತೀಯ ಸ್ಥಾನವನ್ನು, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಗಣೇಶ ದೈಹಿಕ ಶಿಕ್ಷಕರು, ಪರ್ಕಳ ಪ್ರೌಢಶಾಲೆ, ಉಡುಪಿ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಮ್., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ವಲಯ ಮಟ್ಟದ ಶಾಲೆಗಳ ದೈಹಿಕ ಶಿಕ್ಷಕರು ಮತ್ತು ಸ್ಪರ್ಧಾರ್ಥಿಗಳಾದ ವಿದ್ಯಾರ್ಥಿಗಳೂ ಉಪಸ್ಥಿತರಿದ್ದರು.
ಅಭಿಜ್ಞಾ ಕಾರ್ಯಕ್ರಮವನ್ನು ನಿರೂಪಿಸಿ, ಸೌಭಾಗ್ಯ ಸ್ವಾಗತಿಸಿ ವಿಜಯಲಕ್ಷ್ಮಿ ಧನ್ಯವಾದಗಳನ್ನು ಸಮರ್ಪಿಸಿದರು.















