ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ವಿದ್ಯಾರ್ಥಿಗಳಿಗೆ ಶ್ರೇಷ್ಠ ವಿದ್ಯಾದಾನದ ಮೂಲಕ ಸಾಧನೆಗೈಯ್ಯುತ್ತಾ ಇಂದು ವಿಶ್ವಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ.
ನ್ಯಾಷನಲ್ ಸ್ಕೂಲ್ ಅವಾರ್ಡ್ 2025 ರಲ್ಲಿ ರಾಷ್ಟ್ರೀಯ ಮಟ್ಟದ ಬೆಸ್ಟ್ ಡೇ ಕಮ್ ಬೋರ್ಡಿಂಗ್ ಸ್ಕೂಲ್ ಅವಾರ್ಡ್ ಮತ್ತು ಬೆಸ್ಟ್ ಪ್ರಿನ್ಸಿಪಾಲ್ ಪ್ರಮೋಟ್ಸ್ ಪ್ರೋಗ್ರೇಸ್ಸಿವ್ ಲರ್ನಿಂಗ್ – 2025 ಅವಾರ್ಡ್ ಎಂಬ ರಾಷ್ಟ್ರೀಯ ಮಟ್ಟದ ಗೌರವ ಪುರಸ್ಕಾರಕ್ಕೆ ಭಾಜನವಾಯಿತು.
ಬೆಂಗಳೂರಿನ ಹೆಬ್ಬಾಳದ ಕೋರ್ಟ್ಯಾಟ್ ಮ್ಯಾರಿಯೋಟ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಡಾ. ರಾಜ್ ಕತ್ರೀ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಶಿಖಾ ದಿಲನ್ ಎಕ್ಸಿಕ್ಯೂಟಿವ್ ನಿರ್ದೇಶಕರು, ಅವರಿಂದ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪರವಾಗಿ ಸಂಯೋಜಕರಾದ ಲತಾ ದೇವಾಡಿಗ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಐಐಟಿ ಬೆಂಗಳೂರು ಅಧ್ಯಕ್ಷ ಡಾ. ಸೌಮ್ಯ ನಾರಾಯಣನ್, ಟ್ರೇಡ್ ಕಮಿಷನರ್ ಡಾ. ಎಮ್.ಎಸ್. ಪ್ರಕಾಶ್, ಟ್ರಸ್ಟಿಗಳು, ರಾಷ್ಟ್ರೀಯ ಶಿಕ್ಷಣ ಸಮಿತಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಹರ್ಷವನ್ನು ವ್ಯಕ್ತಪಡಿಸುತ್ತಾ ಸಮಾಜ ನಮ್ಮನ್ನು ಗುರುತಿಸುತ್ತಿದ್ದು, ನಾವು ಕಾರ್ಯಗಳನ್ನು ಇನ್ನಷ್ಟು ಸುಧಾರಿಸಿಕೊಂಡು ಮುನ್ನಡೆಯಬೇಕಿದೆ. ಶಾಲೆಯ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿಯಾಗಿರಬೇಕು ಎಂದು ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರನ್ನು ಹುರಿದುಂಬಿಸಿದರು.















