ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊಟೇಲ್ ವೊಂದರಲ್ಲಿ ಸಿಗರೇಟ್ ಗಾಗಿ ರಂಪಾಟ ನಡೆಸುತ್ತಿದ್ದಾಗ ಓರ್ವ ವ್ಯಕ್ತಿ ನೋಡಿದ ಎಂಬ ಕಾರಣಕ್ಕೆ ಗಾಜಿನ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಇಲ್ಲಿನ ಹಟ್ಟಿಯಂಗಡಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಗಣೇಶ ಎಂಬವರು ಹಲ್ಲೆಗೊಳಗಾದವರು.
ಪ್ರಸಾದ ಯಾನೆ ರಬಡ ಎಂಬಾತ ಹಲ್ಲೆ ನಡೆಸಿದವನು. ಈತ ಹೊಟೇಲ್ ಮಾಲಿಕರಲ್ಲಿ ಸಿಗರೇಟು ಕೇಳಿದ್ದು ಆಗ ಮಾಲಿಕ ನಾವು ಇಲ್ಲಿ ಸಿಗರೇಟು ಮಾರುವುದಿಲ್ಲ ಎಂದಿದ್ದಾರೆ.
ಆದರೂ ತಂದುಕೊಡುವಂತೆ ಗಲಾಟೆ ಮಾಡಿದಾಗ ಗಣೇಶ್ ಅವರು ನೋಡಿದರು ಎಂಬ ಕಾರಣಕ್ಕೆ ಅವರನ್ನು ಹಿಡಿದು ಬೈದು ಗಾಜಿನ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










