ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಲಯನ್ಸ್ ಕ್ಲಬ್ ಕೋಸ್ಟಲ್ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬಂಟರೆ ಯಾನೆ ನಾಡವರ ಸಂಕೀರ್ಣದ ಆರ್ ಎನ್ ಶೆಟ್ಟಿ ಸಭಾಭವನದ ಎಸ್. ಎಸ್ ಹಾಲ್ ನಲ್ಲಿ ನಡೆಯಿತು.
317 ಸಿಯ ಮಾಜಿ ಜಿಲ್ಲಾ ಗವರ್ನರ್ ಎಂ.ಜೆ.ಎಫ್ ದಿವಾಕರ ಶೆಟ್ಟಿ ಭದ್ರಾವತಿ ಪದಗ್ರಹಣ ನೆರವೇರಿಸಿದರು.
ಡಾ. ಅಂಪಾರು ನಿತ್ಯಾನಂದ ಶೆಟ್ಟಿ ನೂತನ ಅಧ್ಯಕ್ಷರಾಗಿ, ಭುಜಂಗ ಶೆಟ್ಟಿ ರಟ್ಟಾಡಿ ಕಾರ್ಯದರ್ಶಿಯಾಗಿ, ಅಣ್ಣಪ್ಪ ಶೆಟ್ಟಿ ಯರುಕೋಣೆ ಕೋಶಾಧಿಕಾರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಾಂತೀಯ ಅಧ್ಯಕ್ಷರಾದ ರಜತ್ ಹೆಗ್ಡೆ, ವಲಯ ಅಧ್ಯಕ್ಷರಾದ ವಸಂತರಾಜ್ ಶೆಟ್ಟಿ, ಎಕ್ಸ್ಟೆನ್ಷನ್ ಚಯರ್ ಪರ್ಸನ್ ಅರುಣ್ ಕುಮಾರ್ ಹೆಗ್ಡೆ, ಪ್ರಾಂತೀಯ ಕಾರ್ಯದರ್ಶಿ ಏಕನಾಥ್ ಬೋಳಾರ್, ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಸಂಸಾಡಿ ಶುಭಾಶಂಸನೆಗೈದರು.
ನಮಿತಾ ಪ್ರಭಾಕರ ಶೆಟ್ಟಿ ಅವರ ಪ್ರಾರ್ಥನೆ ಮೂಲಕ ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಸದಸ್ಯರಾದ ಪ್ರಶಾಂತ್ ಶೆಟ್ಟಿ ಶಿರೂರು ಲಯನ್ ಪ್ರಾರ್ಥನೆಯನ್ನು, ವೈ ಪ್ರಭಾಕರ ಶೆಟ್ಟಿ, ಲಯನ್ ಫ್ಲಾಗ್ ಸೆಲ್ಯುಟೇಷನ್ ಹಾಗೂ ಸುಕುಮಾರ್ ಶೆಟ್ಟಿ ಹೇರಿಕುದ್ರು ಲಯನ್ ನೀತಿ ಸಹಿಂತೆ ಓದಿದರು.
ಸಭಾ ಕಾರ್ಯಕ್ರಮದ ಸೇವಾ ಚಟುವಟಿಕೆಯ ಅಂಗವಾಗಿ ಉತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿರುವ ಕುಂದಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗೇಶ್ ಪುತ್ರನ್, ಜೆಇಇ ಯಲ್ಲಿ ಸಾಧನೆ ಮಾಡಿ ಐಐಟಿ ಪ್ರವೇಶ ಪಡೆದುಕೊಂಡ ತೇಜಸ್ ವಿ ನಾಯಕ್, ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆ ಮಾಡಿದ ಆಯುಷ್ ಶೆಟ್ಟಿ, ರಿಷಾ ಆರ್ ಶೆಟ್ಟಿ, ಕ್ರೀಡಾ ಸಾಧಕ ತನೀಶ್ ಶೆಟ್ಟಿಗೆ ಸನ್ಮಾನಿಸಿ ಅಭಿನಂದಿಸಲಾಯಿತು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪೀಡ್ ಮೊಬೈಲ್ ನ ಮಾಲಕ ಮಹಮ್ಮದ್ ಅಶ್ರಫ್ ಅವರಿಂದ ಶಾಲಾ ಬ್ಯಾಗ್ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡು ವಾಲ್ತೂರುಗೆ ಕ್ರೀಡಾ ಸಮವಸ್ತ್ರಗಳನ್ನು ನೀಡಲಾಯಿತು.
ಆರೋಗ್ಯ ಭಾಗ್ಯ ಯೋಜನೆಯಡಿ ಬ್ರೈನ್ ಟ್ಯೂಮರ್‌ಗೆ ಒಳಗಾದ ನೇರಳೆಕಟ್ಟೆಯ ಅಶ್ವತ್ ಆಚಾರ್ಯ ಅವರಿಗೆ ಕಂದಾವರ ಸತೀಶ್ ಶೆಟ್ಟಿ ಅವರಿಂದ ಧನ ಸಹಾಯವನ್ನು ನೀಡಲಾಯಿತು.
ಮಾಜಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಕಂದಾವರ ಪದಪ್ರಧಾನ ನೆರವೇರಿಸಿದ ದಿವಾಕರ ಶೆಟ್ಟಿ ಭದ್ರಾವತಿ ಎಂಜೆಎಫ್ ಅವರ ಪರಿಚಯ ಮಾಡಿದರು. ನೂತನ ಸದಸ್ಯರಿಗೆ ಪ್ರಮಾಣ ವಚನ ಮಾಡಲು ಆಗಮಿಸಿದ ರಂಜನ್ ಕಲ್ಕೂರ ಪಿಎಂಜೆಎಫ್ ಅವರನ್ನು ರತ್ನಾಕರ ಶೆಟ್ಟಿ ಕಂದಾವರ ಪರಿಚಯಿಸಿದರು.
ಹೊಸದಾಗಿ ಸೇರ್ಪಡೆಯಾದ ನೂತನ ಸದಸ್ಯರ ಪರಿಚಯವನ್ನು ಡಾ. ಚೇತನ್ ಶೆಟ್ಟಿ ಕೋವಾಡಿ ಮಾಡಿದರೆ ಪಿಎಂಜೆಎಫ್ ರಂಜನ್ ಕಲ್ಕೂರ ಪ್ರಮಾಣ ವಚನ ಬೋಧಿಸಿದರು. ವಸಂತರಾಜ ಶೆಟ್ಟಿ ನೂತನ ಅಧ್ಯಕ್ಷರ ಪರಿಚಯ ಮಾಡಿದರು.
ಅಭಿನಂದನೆ ಸ್ವೀಕರಿಸಿದ ದಿವಾಕರ ಶೆಟ್ಟಿ ಭದ್ರಾವತಿ ಕೇವಲ ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಇಷ್ಟೊಂದು ಸೇವಾ ಕಾರ್ಯಕ್ರಮಗಳನ್ನು ಮಾಡಿ ಜಿಲ್ಲಾ ಲಯನ್ಸ್ ನಲ್ಲಿ ಅತ್ಯುತ್ತಮ ಕ್ಲಬ್ ಗಳಲ್ಲಿ ಒಂದಾಗಿ ಮೂಡಿ ಬಂದಿದೆ. ಕ್ಲಬ್ ನ ಸೇವಾ ಚಟುವಟಿಕೆ ಕಾರ್ಯವೈಖರಿ ಗಳನ್ನು ನೋಡಿ ಕ್ಲಬ್ ಸದಸ್ಯರ ಸಹಕಾರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಇತರ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಕೋಸ್ಟಲ್ ನ ಕುಟುಂಬ ಸದಸ್ಯರು ಹಾಗೂ ಲಯನ್ಸ್ ಕ್ಲಬ್ ನ ಸರ್ವ ಸದಸ್ಯರು ಹಾಜರಿದ್ದರು.
ಕುಂದಾಪುರ ಲಯನ್ಸ್ ಕ್ಲಬ್ ಕೋಸ್ಟಲ್ ನ ಶೈಲಜಾ ವಸಂತರಾಜ ಶೆಟ್ಟಿ ನಿರೂಪಿಸಿ, ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು ಸ್ವಾಗತಿಸಿ, ಕುಂದಾಪುರ ಲಯನ್ಸ್ ಕ್ಲಬ್ ಕೋಸ್ಟಲ್ ನ ನೂತನ ಪ್ರಧಾನ ಕಾರ್ಯದರ್ಶಿ ಭುಜಂಗ ಶೆಟ್ಟಿ ರಟ್ಟಾಡಿ ವಂದಿಸಿದರು.















